

Jayam Ravi: ಕಳೆದ ಒಂದೆರೆಡು ತಿಂಗಳಿನಿಂದ ತನ್ನ ವೈವಾಹಿಕ ಜೀವನಕ್ಕೆ ಸಂಬಂಧಿಸಿದ ವಿಚಾರಗಳಿಂದಲೇ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ತಮಿಳು ನಟ ಜಯಂ ರವಿ, ವಿವಾದ-ಟೀಕೆಗಳ ಮಧ್ಯೆ ರಿಲೀಸ್ಗೆ ಸಜ್ಜಾಗಿರುವ ನಟ ಸಿದ್ಧಾರ್ಥ್ ಅಭಿನಯದ 3 ಬಿಎಚ್ಕೆ ಚಿತ್ರದ ಪ್ರೀ-ರಿಲೀಸ್ ಈವೆಂಟ್ನಲ್ಲಿ ಭಾಗಿಯಾಗಿ, ಹಲವು ವಿಚಾರಗಳನ್ನು ಮುಕ್ತವಾಗಿ ಮಾತನಾಡಿದರು.
ಪ್ರಸ್ತುತ ಜಯಂ ರವಿ ಮತ್ತು ಅವರ ಪತ್ನಿ ಆರತಿ ರವಿ ಇಬ್ಬರ ನಡುವಿನ ವಿಚ್ಛೇದನ ಅರ್ಜಿ ಇನ್ನೂ ವಿಚಾರಣೆಯಲ್ಲಿದೆ. ಇದರ ಮಧ್ಯೆ ದೊಡ್ಡ ವಿವಾದ ಸೃಷ್ಟಿಯಾಗಿದ್ದು, ರವಿ ಪತ್ನಿ ಆರತಿ ಮತ್ತು ಗಾಯಕಿ ಕೆನಿಶಾ ನಡುವೆ ಪರೋಕ್ಷ ಕಿಚ್ಚು ಭುಗಿಲೆದ್ದಿದೆ. ವಿಚ್ಛೇದನ ಪ್ರಕ್ರಿಯೆ ಇನ್ನೂ ಕೋರ್ಟ್ನಲ್ಲಿ ನಡೆಯುತ್ತಿರುವಾಗಲೇ ಗಾಯಕಿ ಕೆನಿಶಾ ಜೊತೆಗೆ ರವಿ ಸುತ್ತಾಟವನ್ನು ಆರತಿ ಆಕ್ಷೇಪಿಸಿದ್ದಾರೆ. ಇದು ವಿವಾದಕ್ಕೆ ಕಿಚ್ಚು ಹಚ್ಚಿದೆ. ಟೀಕೆ, ಟಿಪ್ಪಣಿಗಳ ನಡುವೆ ಚಿತ್ರದ ಪ್ರೀ-ರಿಲೀಸ್ ಈವೆಂಟ್ನಲ್ಲಿ ಮಾತನಾಡಿದ ರವಿ, ನಾನು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೀನಿ ಎಂಬ ಸಂಗತಿಯನ್ನು ಕಡೆಗೂ ಬಹಿರಂಗ ಪಡಿಸಿದ್ದಾರೆ.
ನಾನು ಹುಟ್ಟಿದ ಮನೆಯಿಂದ ಹಿಡಿದು ಇಲ್ಲಿಯವರೆಗೆ ಬಾಡಿಗೆ ಮನೆಯಲ್ಲಿ ವಾಸವೇ ಮಾಡಿಲ್ಲ. ಸ್ವಂತ ಮನೆಯೊಳಗೆ ಬದುಕು ಕಟ್ಟಿಕೊಂಡ ವ್ಯಕ್ತಿ. ಆದರೆ, ಈಗ ಅದು ಬದಲಾಗಿದೆ. ಪ್ರಸ್ತುತ, ನಾನೊಂದು ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದೀನಿ. ಹೀಗಾಗಿ 3 ಬಿಎಚ್ಕೆ ಚಿತ್ರದ ದೃಶ್ಯ ಮತ್ತು ಕಥೆ ನನಗೆ ಹಲವು ರೀತಿಯಲ್ಲಿ ಹೋಲುತ್ತದೆ. ಇದೊಂದು ಸಿನಿಮಾ ನನಗೆ ಸ್ಫೂರ್ತಿ ನೀಡಿದೆ ಮತ್ತು ನನ್ನ ಜೀವನವನ್ನು ನಾನೇ ನೋಡಿಕೊಳ್ಳುವಂತೆ ಮಾಡಿದೆ. ಇದು ನಾನು ನಿಜ ಜೀವನಕ್ಕೆ ಮರಳುತ್ತಿದ್ದೇನೆ ಎಂಬ ಭಾವನೆಯನ್ನು ನನ್ನಲ್ಲಿ ಬಿಟ್ಟಿದೆ ಎಂದಿದ್ದಾರೆ ಜಯಂ ರವಿ.
ಕಾಲಿವುಡ್ ಸ್ಟಾರ್ ಹೀರೋ, ನಟ ಜಯಂ ರವಿ (ರವಿ ಮೋಹನ್) ಮತ್ತು ಅವರ ಪತ್ನಿ ಆರತಿ ರವಿ ನಡುವಿನ ವಿಚ್ಛೇದನ ಪ್ರಕರಣ ಇದೀಗ ತಮಿಳು ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. 2009ರಲ್ಲಿ ವಿವಾಹವಾದ ಈ ದಂಪತಿ 18 ವರ್ಷಗಳ ದಾಂಪತ್ಯ ಜೀವನಕ್ಕೆ ಕೊನೆ ಹಾಡಲು ಕೋರ್ಟ್ ಮೊರೆ ಹೋಗಿದ್ದಾರೆ. ಪ್ರಸ್ತುತ ಇಬ್ಬರ ನಡುವಿನ ವಿಚ್ಛೇದನ ಅರ್ಜಿ ಇನ್ನೂ ವಿಚಾರಣೆಯಲ್ಲಿದೆ. ಇನ್ನು ಇತ್ತೀಚೆಗೆ ಜಯಂ ರವಿ ಅವರು ಗಾಯಕಿ ಕೆನಿಶಾ ಜೊತೆ ಮದುವೆಯಲ್ಲಿ ಕಾಣಿಸಿಕೊಂಡಿದ್ದೇ ಸದ್ಯ ಆರತಿ ಮತ್ತು ರವಿ ನಡುವಿನ ಜಾಲತಾಣ ಜಟಾಪಟಿಗೆ ಕಾರಣವಾಗಿದೆ.
ಈ ವಿಚಾರ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೇ ಆರತಿ ತುಂಬಾ ಭಾವುಕರಾಗಿ ಸುದೀರ್ಘ ಪೋಸ್ಟ್ ಮೂಲಕ ಈ ವಿಚಾರಕ್ಕೆ ಪ್ರತಿಕ್ರಿಯಿಸಿದ್ದರು. ಅವರ ಬೆನ್ನಲ್ಲೇ ರವಿ ಕೂಡ ಪೋಸ್ಟ್ ಮಾಡಿದ್ದರು. ಒಬ್ಬರ ಬೆನ್ನಲ್ಲೇ ಮತ್ತೊಬ್ಬರು ಜಾಲತಾಣದ ಖಾತೆಗಳಲ್ಲಿ ಸ್ಪಷ್ಟನೆ ನೀಡುವ ಮೂಲಕ ಈ ವಿಚಾರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ.
ಆರತಿ ಮತ್ತು ಜಯಂ ರವಿ ಮಧ್ಯೆ ಇನ್ನೂ ಡಿವೋರ್ಸ್ ಆಗಿಲ್ಲ. ಈ ವಿಚಾರ ಗೊತ್ತಿದ್ದರೂ ಕೆನಿಶಾ ಏಕೆ ಅವರೊಂದಿಗೆ ಓಡಾಡುತ್ತಿದ್ದಾರೆ? ರವಿ ಅವರ ಪ್ರೇಯಸಿ ಆಗಿರುವುದೇಕೆ? ಎಂಬ ಪ್ರಶ್ನೆಗಳು ಕೆನಿಶಾ ವಿರುದ್ಧ ಕೇಳಿಬಂದಿವೆ. ಗಾಯಕಿ ಮತ್ತು ರವಿ ಮಧ್ಯೆ ಪ್ರೇಮಾಂಕುರವಿದೆ. ಆದರೆ, ಇವರಿಬ್ಬರು ಯಾರ ಮುಂದೆಯೂ ಈ ವಿಚಾರವನ್ನು ಇನ್ನೂ ಸ್ಪಷ್ಟಪಡಿಸಿಲ್ಲ ಎಂಬ ಮಾತುಗಳು ಕಾಲಿವುಡ್ ವಲಯದಲ್ಲಿ ಕೇಳಿಬಂದಿವೆ. ಆರತಿ ಮತ್ತು ರವಿ ದಾಂಪತ್ಯ ಮುರಿದುಬೀಳಲು ತಾನೇ ಕಾರಣ ಎಂಬ ಹಲವರ ಟೀಕೆ, ಆರೋಪಗಳಿಗೆ ಸ್ವತಃ ಕೆನಿಶಾ ಅವರೇ ಪ್ರತಿಕ್ರಿಯಿಸಿದ್ದಾರೆ. ಸದ್ಯದ ಮಟ್ಟಿಗೆ ಈ ವಿವಾದ ಬೂದಿ ಮುಚ್ಚಿದ ಕೆಂಡದಂತಿದೆ.