ಐಷಾರಾಮಿ ಕಾರ್ ಬಿಟ್ಟು ರೈಲ್ವೆ ನಿಲ್ದಾಣದಲ್ಲಿ ಕಾದು ಕುಳಿತ ನಟ; ಫ್ಯಾನ್ಸ್‌ಗೆ ಗುರುತಿಸಲು ಸಾಧ್ಯವೇ ಆಗಲಿಲ್ಲ...

viral actor
Published on

ಬೆಂಗಳೂರು: ಖ್ಯಾತ ನಟನೊಬ್ಬ ರೈಲ್ವೆ ನಿಲ್ದಾಣದಲ್ಲಿ ಜನಸಾಮಾನ್ಯರಂತೆ ತನ್ನ ರೈಲಿಗಾಗಿ ಕಾಯುತ್ತಿರುವ ವಿಡಿಯೋ ವೈರಲ್ ಆಗಿದೆ.

ಖ್ಯಾತ ನಟ ಕೇರಳದ ಎರ್ನಾಕುಲಂ ರೈಲು ನಿಲ್ದಾಣದಲ್ಲಿ ಸಾಮಾನ್ಯ ವ್ಯಕ್ತಿಯಂತೆ ರೈಲಿಗಾಗಿ ಕಾಯುತ್ತಾ ಕುಳಿತಿರುವ ವಿಡಿಯೋ ವೈರಲ್ ಆಗಿದೆ. ತನ್ನ ಮುಖದ ಮೇಲೆ ಮಾಸ್ಕ್‌ ಹಾಕಿದ್ದರಿಂದ ಹತ್ತಿರದಲ್ಲಿದ್ದ ಜನರಿಗೆ ಚಿಕ್ಕ ಸುಳಿವು ಸಿಗದಂತೆ ಕುಳಿತಿದ್ದ ನಟನನ್ನು ಜನರೂ ಗುರುತಿಸುವಲ್ಲಿ ವಿಫಲರಾಗಿದ್ದಾರೆ.

ಮಲಯಾಳಂ ಚಿತ್ರರಂಗದ ಜನಪ್ರಿಯ ನಟ ದಿಲೀಪ್ ಕುಮಾರ್ ಅವರು ಕೇರಳದ ಎರ್ನಾಕುಲಂ ರೈಲ್ವೇ ನಿಲ್ದಾಣದಲ್ಲಿ ಯಾರ ಹಂಗಿಲ್ಲದೆ ಸಾಮಾನ್ಯ ಜನರೊಂದಿಗೆ ನಿಂತಿದ್ದ ವಿಡಿಯೋ ಈಗ ವೈರಲ್ ಆಗಿದೆ.

ನಟ ದಿಲೀಪ್‌ ಅಭಿನಯದ ಬಹುನಿರೀಕ್ಷೆಯ ಸಿನಿಮಾ ‘ತಂಕಮಣಿ’ ಇದೇ ಮಾರ್ಚ್ 7 ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಚಿತ್ರದಲ್ಲಿ ಸ್ಮಿನು ಸಿಜೋ ಕೂಡ ಒಂದು ಪಾತ್ರದಲ್ಲಿ ನಟಿಸಿದ್ದಾರೆ. ದಿಲೀಪ್ ಅಭಿನಯದ ‘ಬಾಂದ್ರಾ’ ದಕ್ಷಿಣ ಭಾರತದ ಖ್ಯಾತ ನಟಿ ತಮನ್ನಾ ಭಾಟಿಯಾ ಅವರ ಮೊದಲ ಮಲಯಾಳಂ ಚಿತ್ರವಾಗಿದೆ. ಸದ್ಯ ದಿಲೀಪ್ ತಮ್ಮ ಹೊಸ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net