

ಬೆಂಗಳೂರು: ಕನ್ನಡದ ಖ್ಯಾತ ನಟ ಧ್ರುವ ಸರ್ಜಾ ಜಿಮ್ ಟ್ರೈನರ್ ಪ್ರಶಾಂತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಭಾನುವಾರ (ಮೇ 26) ರಾತ್ರಿ ಬೆಂಗಳೂರಿನ ಬನಶಂಕರಿಯ ಕೆ.ಆರ್. ರಸ್ತೆಯಲ್ಲಿ ಹುಡುಗರ ಗುಂಪೊಂದು ಮಾರಕಾಯುದಗಳಿಂದ ಹಲ್ಲೆ ನಡೆಸಿದೆ ಎಂದು ತಿಳಿದುಬಂದಿದೆ. ಮಚ್ಚಿನಿಂದ ಪ್ರಶಾಂತ್ ಮೇಲೆ ಹಲ್ಲೆ ಆಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ‘ಎಂಎಸ್ ಸುಬ್ಬುಲಕ್ಷ್ಮಿ’ಯಾಗಿ ನಯನತಾರಾ?
ವೈಯಕ್ತಿಕ ವಿಚಾರಕ್ಕೆ ಸ್ಥಳೀಯ ಹುಡುಗರ ಜೊತೆ ಮಾತಿನ ಚಕಮಕಿ ನಡೆದು ಗಲಾಟೆಯಾಗಿದೆ. ಆಗ ಮಚ್ಚಿನಿಂದ ಪ್ರಶಾಂತ್ ಮೇಲೆ ಹುಡುಗರ ಗುಂಪು ಹಲ್ಲೆ ಮಾಡಿದ್ದಾರೆ. ಕೂಡಲೇ ಪ್ರಶಾಂತ್ನನ್ನು ಖಾಸಗಿ ಆಸ್ಪತ್ರೆಗೆ ಸೇರಿಸಿದ್ದು, ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಕುರಿತು ಧ್ರುವ ಪ್ರತಿಕ್ರಿಯೆ ನೀಡಿರುವ ಧ್ರುವ ಸರ್ಜಾ, ‘ವೈಯಕ್ತಿಕ ವಿಚಾರಕ್ಕೆ ಪ್ರಶಾಂತ್ ಮೇಲೆ ಹಲ್ಲೆಯಾಗಿದೆ. ಆತ ನಮ್ಮ ಹುಡುಗ, ಅವನ ಜೊತೆಗಿರುತ್ತೇನೆ' ಎಂದಿದ್ದಾರೆ.
ನಟ ಧ್ರುವ ಸರ್ಜಾ ಕಟ್ಟುಮಸ್ತಾದ ದೇಹ ಹೊಂದಿದ್ದು, ಅವರು ನಿತ್ಯ ಜಿಮ್ ಮಾಡುತ್ತಾರೆ. ಇದಕ್ಕೆ ಅವರ ಜಿಮ್ ಟ್ರೇನರ್ ಪ್ರಶಾಂತ್ ಕೊಡುಗೆಯೂ ಇದೆ. ಈಗ ಪ್ರಶಾಂತ್ ಮೇಲೆ ಹಲ್ಲೆ ನಡೆದಿದೆ.
ಹಲ್ಲೆ ಬಗ್ಗೆ ಬನಶಂಕರಿ ಪೊಲೀಸರಿಗೆ ಪ್ರಶಾಂತ್ ಮಾಹಿತಿ ನೀಡಿದ್ದಾರೆ.