ಧ್ರುವ ಸರ್ಜಿಕಲ್ ಸ್ಟ್ರೈಕ್: ಮಾರ್ಟಿನ್ ಹುಡುಕಾಟದಲ್ಲಿ ಚಕ್ರವ್ಯೂಹದಲ್ಲಿ ಅರ್ಜುನ

Dhruva Sarja Martin Film
Published on

ಬೆಂಗಳೂರು: ಧ್ರುವ ಸರ್ಜಾ ಅಭಿನಯದ, ಎ.ಪಿ. ಅರ್ಜುನ್ ನಿರ್ದೇಶನದ ಪ್ಯಾನ್ ಇಂಡಿಯಾ ಚಿತ್ರ ಮಾರ್ಟಿನ್ ಟೀಸರ್ ಬಿಡುಗಡೆಯಾಗಿದೆ. ಕೇವಲ ಒಂದೇ ದಿನದಲ್ಲಿ ಮೂರು ಕೋಟಿಗೂ ಅಧಿಕ ಬಾರಿ ವೀಕ್ಷಣೆಯಾಗಿದೆ. ವಿಶೇಷ ಅಂದರೆ ಗುರುವಾರ (ಫೆ. 23) ಮೊದಲ ಬಾರಿಗೆ ಪೇಯ್್ಡ ಪ್ರೀಮಿಯರ್ ಶೋ ಆಯೋಜಿಸಲಾಗಿತ್ತು.

ಟೀಸರ್ ಬಿಡುಗಡೆಯ ಬಳಿಕ ಧ್ರುವ ಸರ್ಜಾ, ಎಲ್ಲ ಕಥೆಗಳನ್ನೂ ಪ್ಯಾನ್ ಇಂಡಿಯಾ ಮಾಡಲಾಗುವುದಿಲ್ಲ. ಆದರೆ, ಮಾರ್ಟಿನ್ ಆ ರೀತಿಯ ಕಥೆ. ಯಶ್ ಮತ್ತು ಕಿಚ್ಚ ಸುದೀಪ್ ಇಬ್ಬರೂ ನನ್ನ ಸೀನಿಯರ್​ಗಳು. ನಾನು ಅವರೊಂದಿಗೆ ಸ್ಪರ್ಧಿಸುತ್ತಿಲ್ಲ. ನನ್ನ ಮೇಲೆ ನಾನೂ ಸ್ಪರ್ಧಿಸಲು ಇಷ್ಟಪಡುತ್ತೇನೆ. ನಾನು ಅರ್ಜುನ್ ಪಾತ್ರದಲ್ಲಿ ನಟಿಸಿದ್ದೇನೆ. ಮಾರ್ಟಿನ್ ಯಾರು ಎಂಬುದೇ ಕಥೆ, ಎಂದು ಮಾಹಿತಿ ನೀಡಿದರು.

ಬಳಿಕ ನಿರ್ದೇಶಕ ಎ.ಪಿ. ಅರ್ಜುನ್, ಧ್ರುವ ಮೊದಲ ಸಿನಿಮಾ ಅದ್ಧೂರಿ ಬಿಡುಗಡೆಯಾಗಿ 10 ವರ್ಷಗಳ ಬಳಿಕ ಮತ್ತೆ ಈಗ ಎರಡನೇ ಬಾರಿಗೆ ಜತೆಯಾಗಿದ್ದೇವೆ. ಇದು ಕಂಪ್ಲೀಟ್ ಆಕ್ಷನ್ ಸಿನಿಮಾ, ಎಂದು ಹೇಳಿಕೊಂಡರು. ಚಿತ್ರಕ್ಕೆ ಅರ್ಜುನ್ ಸರ್ಜಾ ಕಥೆ ಬರೆದಿದ್ದು, ಧ್ರುವ ಅಂಕಲ್ ಆಗಿ ಹಾಗೂ ಮಾರ್ಟಿನ್ ಕಥೆಗಾರನಾಗಿ ನನಗೆ ಈ ಚಿತ್ರದಲ್ಲಿ ಎರಡು ಜವಾಬ್ದಾರಿಗಳಿವೆ. ಧ್ರುವನ ಐದನೇ ಚಿತ್ರವಿದು. ಪಕ್ಕಾ ಕಮರ್ಷಿಯಲ್ ಸಿನಿಮಾ. ಧ್ರುವನಿಗೆ ಕಥೆ ಒಪ್ಪಿಸುವುದು ತುಂಬ ಕಷ್ಟ. ನಾನು ಇದುವರೆಗೆ ಮಾಡಿರುವ ಕಥೆಗಳಲ್ಲಿಯೇ ಇದು ಅತ್ಯುತ್ತಮ ಕಮರ್ಷಿಯಲ್ ಕಥೆ, ಎಂದು ಮಾಹಿತಿ ನೀಡಿದರು.

ಇದೊಂದು ಸಸ್ಪೆನ್ಸ್ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಧ್ರುವಾಗೆ ನಾಯಕಿಯಾಗಿ ವೈಭವಿ ಶಾಂಡಿಲ್ಯ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಸತ್ಯ ಹೆಗ್ಡೆ ಛಾಯಾಗ್ರಹಣ, ಮಣಿ ಶರ್ಮಾ ಸಂಗೀತ, ರವಿ ಬಸ್ರೂರ್ ಹಿನ್ನೆಲೆ ಸಂಗೀತ, ರಾಮ್ - ಲಕ್ಷ್ಮಣ್ ಸಾಹಸ ನಿರ್ದೇಶನ, ಮೋಹನ್ ಬಿ. ಕೆರೆ ಕಲಾನಿರ್ದೇಶನ, ಹಾಗೂ ಕೆ.ಎಂ. ಪ್ರಕಾಶ್ ಸಂಕಲನ ಇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net