ಜನ್ಮದಿನದ ಪ್ರಯುಕ್ತ ಕರಿಚಿರತೆ ದತ್ತು ಪಡೆದ ಧನ್​ವೀರ್​!

collage (7)
Published on

ಬೆಂಗಳೂರು: ಸ್ಯಾಂಡಲ್​ವುಡ್​ ನಟ ಶಿವರಾಜ್​ಕುಮಾರ್​ ಇತ್ತೀಚೆಗಷ್ಟೇ ಆನೆ ವಿಚಾರಕ್ಕೆ ಸುದ್ದಿಯಾಗಿದ್ದರು. ಮೈಸೂರು ಮೃಗಾಲಯದಲ್ಲಿನ ಪಾರ್ವತಿ ಹೆಸರಿನ ಹೆಣ್ಣು ಆನೆಯೊಂದನ್ನು ದತ್ತು ಪಡೆದುಕೊಂಡಿದ್ದರು. ಇದೀಗ ಆ ಕೆಲಸವನ್ನು ಅವರ ಸ್ಯಾಂಡಲ್​ವುಡ್​ನ ಮತ್ತೋರ್ವ ನಟ ಮುಂದುವರಿಸಿದ್ದಾರೆ.

ಬಜಾರ್ ಸಿನಿಮಾ ಮೂಲಕ ಧೂಳೆಬ್ಬಿಸಿದ್ದ ನಟ ಧನ್​ವೀರ್​ ಗೌಡ, ಮೈಸೂರು ಮೃಗಾಲಯದಲ್ಲಿನ ಕರಿ ಚಿರತೆಯನ್ನು ದತ್ತು ಪಡೆದುಕೊಂಡಿದ್ದಾರೆ. ಒಂದು ವರ್ಷದ ಅವಧಿಗೆ ದತ್ತು ಪಡೆದುಕೊಂಡಿರುವ ಅವರು, ಅದರನ ನಿರ್ವಹಣಾ ವೆಚ್ಚವನ್ನು ಮೃಗಾಲಯ ಸಿಬ್ಬಂದಿಗೆ ಈಗಾಗಲೇ ನೀಡಿಬಂದಿದ್ದಾರೆ.

ವಿಶೇಷ ಏನೆಂದರೆ, ಇಂದು ಧನ್​ವೀರ್​ ಜನ್ಮದಿನ. ಆ ಪ್ರಯುಕ್ತ ಹರಿ ಸಂತೋಷ್​ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ಬಂಪರ್​ ಚಿತ್ರದ ಟೀಸರ್ ಸಹ ಬಿಡುಗಡೆಯಾಗಿದೆ. ಇದೀಗ ಈ ದಿನದಂದೇ ಕರಿ ಚಿರತೆ ದತ್ತು ಪಡೆದುಕೊಂಡು ಸುದ್ದಿಯಲ್ಲಿದ್ದಾರೆ.

ಅದೇ ರೀತಿ ಶಿವಣ್ಣ ಅವರ ಅಭಿಮಾನಿಗಳು ಭಾನುವಾರವಷ್ಟೇ ಮೈಸೂರಿಗೆ ತೆರಳಿ ಮೃಗಾಲಯದಲ್ಲಿನ ಪ್ರಾಣಿಗಳನ್ನು ದತ್ತು ಪಡೆದುಕೊಂಡು ಸುದ್ದಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net