

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ನಟ ದರ್ಶನ್ಗೆ ರಾಜ್ಯಾತಿಥ್ಯ ಕೊಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದ ಬೆನ್ನಲ್ಲೇ ದರ್ಶನ್ ಮತ್ತು ಗ್ಯಾಂಗ್ನ ಬೇರೆ ಜೈಲಿಗೆ ಶಿಫ್ಟ್ ಮಾಡಲಾಗಿದೆ.
ನಟ ದರ್ಶನ್ ಅವರು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಎಂಟ್ರಿ ಆಗಿದ್ದಾರೆ. ಮುಂಜಾನೆ 10 ಗಂಟೆ ಸುಮಾರಿಗೆ ಅವರು ಬಳ್ಳಾರಿ ಜೈಲು ತಲುಪಿದ್ದಾರೆ. ಮುಂಜಾನೆ 4.30ರ ಸುಮಾರಿಗೆ ಬೆಂಗಳೂರಿನ ಕೇಂದ್ರ ಕಾರಾಗೃಹದಿಂದ ಅವರನ್ನು ಕರೆದುಕೊಂಡು ಹೋಗಲಾಯಿತು. ಸುಮಾರು ಐದೂವರೆ ಗಂಟೆಗಳ ಪ್ರಯಾಣದ ಬಳಿಕ ಅವರನ್ನು ಬಳ್ಳಾರಿಗೆ ತಲುಪಿದ್ದಾರೆ.
ದರ್ಶನ್ ಜೈಲಿಗೆ ಬರುವವಾಗ ಕೈಯಲ್ಲಿ ಕೂಲಿಂಗ್ ಗ್ಲಾಸ್, ಬೆಡ್ ಶಿಟ್, ನೀರಿನ ಬಾಟೆಲ್ ಹಿಡಿದು ಬ್ರ್ಯಾಂಡೆಡ್ ಶರ್ಟ್ ಧರಿಸಿ ಜೈಲಿಗೆ ಟ್ ಎಂಟ್ರಿಯಾಗಿದ್ದಾರೆ. ದರ್ಶನ್ ನೋಡಲು ಬಳ್ಳಾರಿ ಜೈಲಿನ ಬಳಿ ಅಭಿಮಾನಿಗಳು ಜಮಾಯಿಸಿದ್ದರು. ದರ್ಶನ್ ಇದ್ದ ವಾಹನ ಬರುತ್ತಿದ್ದಂತೆಯೇ ದರ್ಶನ್, ದರ್ಶನ್ ಎಂದು ಅಭಿಮಾನಿಗಳು ಕೂಗಿದ್ದಾರೆ.
ಹೊರ ಭದ್ರತಾ ವಿಭಾಗದಲ್ಲಿ ಒಟ್ಟು 11 ಸೆಲ್‌ಗಳಿದ್ದು, ಒಂದು ಸೆಲ್‌ನಲ್ಲಿ ಇಬ್ಬರು ಕೈದಿಗಳು ಇರುವ ವ್ಯವಸ್ಥೆ ಇದೆ. ಪ್ರತಿಯೊಂದು ಸೆಲ್ 10/10 ಅಡಿ ಅಗಲವನ್ನು ಹೊಂದಿದೆ. ಇಲ್ಲಿರುವ ಹನ್ನೊಂದು ಸೆಲ್‌ಗಳಿಗೆ ದಿನದ 24 ಗಂಟೆಯೂ ಭದ್ರತೆ ವ್ಯವಸ್ಥೆ ಮಾಡಲಾಗುತ್ತದೆ. ಸೆಲ್ ಮುಂಭಾಗ 20 ಅಡಿ ಅಗಲ 60 ಅಡಿ ಉದ್ದದ ಜಾಗದಲ್ಲಿ ವಾಕಿಂಗ್ ಮಾಡಬಹುದು. ಬೆಳಗ್ಗೆ ಮತ್ತು ಸಂಜೆ ವಾಕಿಂಗ್ ಮಾಡಲು 15 ನಿಮಿಷ ಅವಕಾಶವಿದೆ. ಈ ವೇಳೆ ಭದ್ರತೆ ಸಿಬ್ಬಂದಿ ಕೂಡ ಹಾಜರಿರುತ್ತಾರೆ.
ಸೆಲ್‌ನ ಒಳಗಡೆ ಬಾತ್ ರೂಂ, ಶೌಚಾಲಯದ ವ್ಯವಸ್ಥೆ ಇದ್ದು, ಸ್ನಾನ ಮಾಡಲು ತಣ್ಣೀರು ಮಾತ್ರ ಇರುತ್ತದೆ. ಈ ಸೆಲ್‌ಗೆ ಎರಡು ಗೇಟ್‌ಗಳಿರುತ್ತವೆ. ಇಲ್ಲಿರುವ ಹನ್ನೊಂದು ಸೆಲ್ ಗಳಲ್ಲಿ ಸದ್ಯ ಶಿವಮೊಗ್ಗ, ಹಾಸನ,ಬೆಂಗಳೂರು, ಮಂಗಳೂರು ಮೂಲದ ಕೈದಿಗಳಿದ್ದಾರೆ.