

ಬೆಂಗಳೂರು: ಇಂದು ಚಿತ್ರದುರ್ಗದ ರೇಣುಕಸ್ವಾಮಿ ಬರ್ಬರ ಹತ್ಯೆ ಪ್ರಕರಣದಲ್ಲಿ ಎ2 ಆರೋಪಿ ಆಗಿರುವ ಕನ್ನಡ ಚಿತ್ರನಟ, ಆರೋಪಿ ದರ್ಶನ್ (Actor Darshan) ಜಾಮೀನು ಅರ್ಜಿ ನಡೆಸಿದ ಹೈಕೋರ್ಟ್, ಇದೀಗ ಮತ್ತೊಮ್ಮೆ ಬೇಲ್ ಭವಿಷ್ಯವನ್ನು ಅ.29ಕ್ಕೆ ಮುಂದೂಡಿದೆ.
ಕಳೆದ ಬಾರಿ ನಡೆದ ವಿಚಾರಣೆಯಲ್ಲಿ ದರ್ಶನ್ ಪರ ವಕೀಲ ಸಿ.ವಿ. ನಾಗೇಶ್ ಅವರು ಮಂಡಿಸಿದ ವಾದವನ್ನು ಆಲಿಸಿದ ಹೈಕೋರ್ಟ್, ಜಾಮೀನು ಅರ್ಜಿ ವಿಚಾರಣೆಯನ್ನು ಅ.28ಕ್ಕೆ ಮುಂದೂಡಿತ್ತು. ಅದರಂತೆಯೇ ಇಂದು ವಿಚಾರಣೆ ನಡೆಸಿದ ಕೋರ್ಟ್, ಮತ್ತೆ ಬೇಲ್ ಭವಿಷ್ಯವನ್ನು ನಾಳೆಗೆ ಮುಂದೂಡಿಕೆ ಮಾಡಿದೆ.
ಸಿಟಿ ಸಿವಿಲ್ ಕೋರ್ಟ್ನಲ್ಲಿ ರೇಣುಕಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಮತ್ತು ಎ2 ಆರೋಪಿ ದರ್ಶನ್ ಜಾಮೀನು ಅರ್ಜಿ ವಜಾಗೊಂಡಿತ್ತು. ಕೋರ್ಟ್ ತೀರ್ಪಿನಿಂದ ಕಂಗಾಲಾದ ದರ್ಶನ್, ಇದೀಗ ಹೈಕೋರ್ಟ್ನಲ್ಲಿ ತಮ್ಮ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಪ್ರಕರಣದಿಂದ ದರ್ಶನ್ಗೆ ಮುಕ್ತಿ ಸಿಗಲಿದೆಯಾ? ನ್ಯಾಯಾಲಯ ಕೊಡುವ ತೀರ್ಪು ಏನು ಎಂಬುದನ್ನು ಸದ್ಯ ಕಾದು ನೋಡಬೇಕಿದೆ.