

ನವದೆಹಲಿ: ಬಾಲಿವುಟ್ ನಟ ದಲೀಪ್ ತಾಹಿಲ್ ಕುಡಿದು ಕಾರು ಚಾಲನೆ ಮಾಡಿ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದ್ದರು. ಈ ಘಟನೆಯಲ್ಲಿ ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದರು. 2018ರಲ್ಲಿ ನಡೆಯ ಈ ಘಟನೆಯ ಕುರಿತಾಗಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ತೀರ್ಪು ಪ್ರಕಟ ಮಾಡಿದೆ.
ನಡೆದಿದ್ದೇನು?: 2018ರಲ್ಲಿ ದಲೀಪ್ ಅವರು ಕಾರಿನಲ್ಲಿ ಹೋಗುತ್ತಿದ್ದಾಗ, ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದ್ದರು. ಘಟನೆಯಲ್ಲಿ ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದರು. ಕಾರು ಗುದ್ದಿದ ಪರಿಣಾಮ ಜೆನಿತಾ ಗಾಂಧಿ ಎನ್ನುವವರ ಬೆನ್ನು ಮತ್ತು ಕುತ್ತಿಗೆಗೆ ತೀವ್ರವಾಗಿ ಪೆಟ್ಟು ಬಿದ್ದಿದೆ. ಜೆನಿತಾ ಗಾಂಧಿ ಮತ್ತು ಗೌರವ್ ಚುಗ್ ಆಟೋರಿಕ್ಷಾದಿಂದ ಇಳಿದು ನೋಡಿದಾಗ ನಟ ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು.
ರಸ್ತೆಯಲ್ಲಿ ಜನಸಂದಣಿಯಿಂದಾಗಿ ಕಾರು ಹೆಚ್ಚು ದೂರ ಹೋಗಲು ಸಾಧ್ಯವಾಗಲಿಲ್ಲ. ಈ ಪ್ರಕರಣದಲ್ಲಿ ಹಿಟ್ ಆ್ಯಂಡ್ ರನ್ ಆಗಿದ್ದ ಸಂದರ್ಭದಲ್ಲಿ ನಟ ಸಿಕ್ಕಿಬಿದ್ದಾಗ, ಪೊಲೀಸರಿಗೆ ಆಲ್ಕೋಹಾಲ್ ಪರೀಕ್ಷೆಗೆ ಬ್ಲಡ್ ಸ್ಯಾಂಪಲ್ ನೀಡಲು ನಿರಾಕರಿಸಿದ್ದರು ಎಂದು ಕೋರ್ಟ್ಗೆ ಸಲ್ಲಿಸಲಾದ ವರದಿಯಲ್ಲಿ ಪೊಲೀಸರು ಹೇಳಿಕೆ ನೀಡಲಾಗಿದೆ. ಐದು ವರ್ಷಗಳ ಬಳಿಕ ಅಂತೂ ತೀರ್ಪು ಹೊರಗೆ ಬಿದ್ದಿದ್ದು ನಟನಿಗೆ ಶಿಕ್ಷೆಯಾಗಿದೆ.
65 ವರ್ಷದ ನಟ ದಲೀಪ್ ತಾಹಿಲ್ ಡ್ರಂಕ್ ಅಂಡ್ ಡ್ರೈವ್ ಕೇಸ್ ನಲ್ಲಿ ಜೈಲು: ಕಳೆದ ಐದು ವರ್ಷಗಳಿಂದ ಈ ಪ್ರಕರಣ ನಿರಂತರವಾಗಿ ನಡೆಯುತ್ತು. ನಟ ದಲೀಪ್ ತಾಹಿಲ್ ಅವರ 2018 ರ ಹಿಟ್ ಅಂಡ್ ರನ್ ಪ್ರಕರಣಕ್ಕೆ ಅಂತಿಮವಾಗಿ ತೀರ್ಪು ಸಿಕ್ಕಿದೆ. ಕುಡಿದು ವಾಹನ ಚಲಾಯಿಸಿ ಮಹಿಳೆಯನ್ನು ಗಾಯಗೊಳಿಸಿದ್ದಕ್ಕಾಗಿ ಬಾಜಿಗರ್ ನಟನಿಗೆ ಎರಡು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ಚಲನಚಿತ್ರಗಳು, ಟಿವಿ ಶೋಗಳು ಮತ್ತು ರಂಗಭೂಮಿಯಲ್ಲಿನ ಕೆಲಸಕ್ಕಾಗಿ ಹೆಸರುವಾಸಿಯಾದ ನಟ ದಲೀಪ್ ತಾಹಿಲ್ 'ಬಾಜಿಗರ್' 'ರಾಜಾ' 'ಹಮ್ ಹೇ ರಹೀ ಪ್ಯಾರ್ ಕೆ' , 'ಕಯಾಮತ್ ಸೆ ಕಯಾಮತ್ ತಕ್' ಬ್ಲಾಕ್ಬಸ್ಟರ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.