

ಬೆಂಗಳೂರು: ( Daali Dhananjay Engagement ) ನಟ ಡಾಲಿ ಧನಂಜಯ್ (Daali Dhananjay) ವೈದ್ಯೆ ಧನ್ಯತಾ (Dhanyata) ನಿಶ್ಚಿತಾರ್ಥ ಕಾರ್ಯಕ್ರಮ ಇಂದು(ನ.17) ನಡೆಯಿತು. ನಿಶ್ಚಿತಾರ್ಥದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ಜೋಡಿಗೆ ಸ್ಯಾಂಡಲ್ವುಡ್ ತಾರೆಯರು ಹಾಗೂ ಅಭಿಮಾನಿಗಳು ಶುಭಕೋರಿದ್ದಾರೆ.
ಅರಸಿಕೆರೆ ತಾಲೂಕು ಕಾಳೇನಹಳ್ಳಿಯಲ್ಲಿರುವ ಧನಂಜಯ್ ನಿವಾಸದಲ್ಲಿ ಸರಳವಾಗಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಿತು. 16ನೇ ಫೆಬ್ರವರಿ 2025ರಂದು ಧನಂಜಯ್ ಮತ್ತು ಧನ್ಯತಾ ಮದುವೆ ನಡೆಯಲಿದೆ. ಮೈಸೂರಿನ ಎಕ್ಸಿಬಿಷನ್ ಗ್ರೌಂಡ್ ನಲ್ಲಿ ಇಬ್ಬರ ಮದುವೆ ನಡೆಯಲಿ್ಎ ಎನ್ನುವ ಮಾಹಿತಿ ಲಭ್ಯವಾಗಿದೆ.
ಡಾಲಿ ಭಾವಿ ಪತ್ನಿ ಗೈನೋಕಾಲಾಜಿಸ್ಟ್ ಆಗಿರುವ ಧನ್ಯತಾ. ನವೆಂಬರ್ 1ರಂದು ಡಾಲಿ ಧನಂಜಯ್ ತಾವು ಮದುವೆಯಾಗುತ್ತಿರುವ ಧನ್ಯತಾ ಅವರನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದರು.
2013ರಲ್ಲಿ ಡೈರೆಕ್ಟರ್ ಸ್ಪೆಷಲ್ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟ ಡಾಲಿ ಧನಂಜಯ್ ದೈತ್ಯ ಪ್ರತಿಭೆಯಾಗಿ ಬೆಳೆದಿದ್ದಾರೆ. ನಾಯಕ ನಟನಾಗಿ, ಚಿತ್ರ ನಿರ್ಮಾಪಕನಾಗಿಯೂ ಕನ್ನಡ ಚಿತ್ರರಂಗಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ.