ಎಂಗೇಜ್ ಆದ 'ದಿ ವಿಲನ್' ನಟಿ ಆಮಿ ಜಾಕ್ಸನ್; 4 ವರ್ಷದ ಮಗನಿರುವ ನಟಿಗೆ ಇದು 2ನೇ ಪ್ರೀತಿ..

amyjackson
Published on

ಮುಂಬೈ: ದಿ ವಿಲನ್​ ಸಿನಿಮಾದಲ್ಲಿ  ಸುದೀಪ್​ಗೆ ಜೋಡಿಯಾಗಿ ನಟಿಸಿದ್ದ  ನಟಿ ಆಮಿ ಜಾಕ್ಸನ್ ತೆಲುಗು ಮತ್ತು ತಮಿಳು ಚಲನಚಿತ್ರಗಳೊಂದಿಗೆ  ಪ್ರೇಕ್ಷಕರಿಗೆ ಪರಿಚಿತರಾಗಿದ್ದಾರೆ. ಸುಮಾರು ಎರಡು ವರ್ಷಗಳ ಡೇಟಿಂಗ್ ಬಳಿಕ ತಮ್ಮ ಬಾಯ್ ಫ್ರೆಂಡ್ ಎಡ್ ವೆಸ್ಟ್‌ವಿಕ್ ಅವರೊಂದಿಗೆ  ನಿಶ್ಚಿತಾರ್ಥ  ಮಾಡಿಕೊಂಡಿದ್ದಾರೆ.

ಸಿನಿಮಾಗಳ ಮೂಲಕ ಪ್ರೇಕ್ಷಕರ ಮನಗೆದ್ದಿರುವ ಆಮಿ ಜಾಕ್ಸನ್, ಈ ಹಿಂದೆ ಇಂಗ್ಲೆಂಡ್ ಮೂಲದ ಜಾರ್ಜ್ ಎಂಬುವವರ ಜತೆ ಪ್ರೇಮ ಸಂಬಂಧ ಹೊಂದಿದ್ದರು. ಮದುವೆಯಾಗದಿದ್ದರೂ ಆಮಿ ಜಾಕ್ಸನ್ ಅವರೊಂದಿಗೆ ಮೂರು ವರ್ಷಗಳ ಕಾಲ ಲಿವಿಂಗ್ ರಿಲೇಶನ್ ಶಿಪ್ ನಲ್ಲಿದ್ದು ಮಗುವಿನ ತಾಯಿಯಾದರು.ಆದರೆ ಜಾರ್ಜ್ ಜೊತೆಗಿನ ಭಿನ್ನಾಭಿಪ್ರಾಯದಿಂದ ಆಮಿ ಜಾಕ್ಸನ್ 2022 ರಲ್ಲಿ ಅವರಿಂದ ಬೇರ್ಪಟ್ಟರು. ನಂತರ ಒಂದು ಮುದ್ದಾದ ಮುಗುವಿಗೆ ಜನ್ಮ ನೀಡಿದರು. ನಂತರ ಒಂಟಿಯಾಗಿ ಜೀವನ ನಡೆಸುತ್ತಿದ್ದ ಆಮಿ ಜಾಕ್ಸನ್.

ಸ್ವಲ್ಪ ಸಮಯದ ನಂತರ, ಆಮಿ ಜಾಕ್ಸನ್ ಎಡ್ ವೆಸ್ಟ್ವಿಕ್ ಎಂಬ ಬ್ರಿಟಿಷ್ ನಟನನ್ನು ಪ್ರೀತಿಸುತ್ತಿದ್ದಳು. ಇತ್ತೀಚೆಗೆ, ಸ್ವಿಟ್ಜರ್ಲೆಂಡ್‌ನ ಹಿಮಭರಿತ ಪರ್ವತಗಳಲ್ಲಿನ ಸೇತುವೆಯ ಮೇಲೆ ಮೊಣಕಾಲುಗಳ ಮೇಲೆ ಕುಳಿತು ಆಮಿ ಜಾಕ್ಸನ್‌ಗೆ ಎಡ್ ವೆಸ್ಟ್‌ವಿಕ್ ಉಂಗುರವನ್ನು ನೀಡಿದರು. ಆಮಿ ಜಾಕ್ಸನ್ ಅವರು ಸಾಮಾಜಿಕ ಮಾಧ್ಯಮದಲ್ಲಿ "ಹೆಲ್ ಯೆಸ್" ಎಂದು ಆಮಿ ಜಾಕ್ಸನ್ ಫೋಟೋಗಳಿಗೆ ಶೀರ್ಷಿಕೆ ನೀಡಿ ಪೋಸ್ಟ್ ಮಾಡಿದ್ದಾರೆ. ಎಡ್ ವೆಸ್ಟ್‌ವಿಕ್ ಮತ್ತು ಆಮಿ ಜಾಕ್ಸನ್ ಅವರ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. "ನಾನು ಜಾಕ್‌ಪಾಟ್ ಹೊಡೆದಿದ್ದೇನೆ" ಎಂದು ವೆಸ್ಟ್‌ವಿಕ್ ತಮ್ಮ ಇನ್​ಸ್ಟಾಗ್ರಾಮ್​​ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

ಆಮಿ ಜಾಕ್ಸನ್ ಅವರು ಈ ಹಿಂದೆ ಲಂಡನ್ ಮೂಲದ ವಾಣಿಜ್ಯೋದ್ಯಮಿ ಜಾರ್ಜ್ ಪನಾಯೊಟೌ ಅವರೊಂದಿಗೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು ಮತ್ತು ಅವರಿಗೆ ಆಂಡ್ರಿಯಾಸ್ ಎಂಬ ನಾಲ್ಕು ವರ್ಷದ ಮಗನಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net