

ಕೋಲಾರ: ಸರ್ಕಾರಿ ನೌಕರರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರ‍್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಅಗತ್ಯಬಿದ್ದರೆ ಹೋರಾಟ ನಡೆಸಲು ಸಿದ್ಧ ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಅಜಯ್ ಕುಮಾರ್ ಹೇಳಿದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸರ್ಕಾರಿ ನೌಕರರ ಸಂಘವು ಶತಮಾನಗಳ ಇತಿಹಾಸ ಹೊಂದಿದೆ. ಹಗಲುರಾತ್ರಿ ನೌಕರರ ಸೇವೆಗೆ ಸಂಘ ಸಿದ್ಧವಿದೆ ಎಂದರು.
ಯಾವುದೇ ಬಾಹ್ಯ ವ್ಯಕ್ತಿಗಳಿಂದ ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸುವುದಾಗಲಿ, ಇಲ್ಲವೇ ಒತ್ತಡ ಹಾಕುವುದಾಗಲಿ ಮಾಡಿದರೆ ಸಂಘದ ಗಮನಕ್ಕೆ ತರಬೇಕು ಎಂದರು.
ರಾಜ್ಯ ಪರಿಷತ್ ಸದಸ್ಯ ಶ್ರೀನಿವಾಸರೆಡ್ಡಿ ಮಾತನಾಡಿ, ನೌಕರರ ಪರವಾದ ಹೋರಾಟಕ್ಕೆ ಸಂಘ ಕ್ರಮವಹಿಸಲಿದೆ. ನೌಕರರ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಮಟ್ಟದಲ್ಲಿ ಗಮನಸೆಳೆಯಲಾಗುವುದು ಎಂದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾ ಖಜಾಂಚಿ ವಿ.ಮುರಳಿಮೋಹನ್ ಮಾತನಾಡಿ, ಶಿಕ್ಷಕರ ಪರವಾದ ಕೆಲಸದಲ್ಲಿ ಸಂಘ ಪ್ರಾಮಾಣಿಕವಾಗಿ ತೊಡಗಿಸಿಕೊಂಡಿದ್ದು, ಶಿಕ್ಷಕರ ಮತ್ತು ನೌಕರರ ಸೇವೆಗಳನ್ನು ಸಕಾಲದಲ್ಲಿ ತಲುಪಿಸಲು ಎಲ್ಲರೂ ಪ್ರಾಮಾಣಿಕವಾಗಿ ದುಡಿಯಬೇಕು ಎಂದರು.
ಎನ್‌ಪಿಎಸ್‌ಯಿAದ ಒಪಿಎಸ್ ತರುವುದು, ಹಬ್ಬದ ಮುಂಗಡ ೨೫,೦೦೦ ರೂ.ನಿಂದÀ ೫೦,೦೦೦ಕ್ಕೆ ಹೆಚ್ಚಿಸುವುದು, ಕ್ಯಾಶ್‌ಲೆಸ್ ಚಿಕಿತ್ಸೆ, ನೌಕರರ ಮರಣದ ಅಂತ್ಯಸAಸ್ಕಾರ ಹಣ ೧೫೦೦೦ ರೂ.ನಿಂದ ೨೫,೦೦೦ಕ್ಕೆ ಹೆಚ್ವಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ರಾಜ್ಯ ಕಾರ್ಯಕಾರಿ ಸಮಿತಿಯಲ್ಲಿ ಅನುಮೋದನೆ ನೀಡಲಾಗಿದೆ ಎಂದರು.
ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಮಾರ್, ಉಪನಿರ್ದೇಶಕ ಕೃಷ್ಣಮೂರ್ತಿ, ಡಿವೈಎಸ್ಪಿ ಶಂಕರೇಗೌಡ, ತಾಂತ್ರಿಕ ಸಹಾಯಕರಾದ ಶರಣಪ್ಪ ಜಮಾದಾರ್ ಹಾಜರಿದ್ದರು.