ಪಿಂಚಣಿ ಹೆಚ್ಚಳಕ್ಕೆ ಕ್ರಮ

7-67bb68750231e
Published on

ನವದೆಹಲಿ: ಕೈಗಾರಿಕೆ, ಸಾರ್ವಜನಿಕ, ಸಹಕಾರ ಮತ್ತು ಖಾಸಗಿ ವಲಯದ ಪಿಂಚಣಿದಾರರಿಗೆ ಕನಿಷ್ಠ ಮಾಸಿಕ 7500 ರೂ.ಗೆ ಪಿಂಚಣಿ ಹೆಚ್ಚಿಸುವ ಬಗ್ಗೆ ಸರ್ಕಾರವು ತ್ವರಿತವಾಗಿ ಕ್ರಮ ಕೈಗೊಳ್ಳಲಿದೆ. ಸರ್ಕಾರದ ಈ ಕ್ರಮದಿಂದ 78 ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗಲಿದೆ ಎಂದು ಕೇಂದ್ರ ಕಾರ್ವಿುಕ ಸಚಿವ ಮನ್​ಸುಖ್ ಮಾಂಡ ವೀಯ ಹೇಳಿದ್ದಾರೆ.

ಪಿಂಚಣಿ ಮೊತ್ತ ಹೆಚ್ಚಿಸಬೇಕೆಂದು ಆಗ್ರಹಿಸಿ ತಮ್ಮನ್ನು ಭೇಟಿಯಾದ ಇಪಿಎಸ್-95 ರಾಷ್ಟ್ರೀಯ ಆಂದೋಲನ ಸಮಿತಿಯ ನಿಯೋಗಕ್ಕೆ ಸಚಿವರು ಈ ಭರವಸೆ ನೀಡಿದ್ದಾರೆ. ಇಪಿಎಸ್-95 ರಾಷ್ಟ್ರೀಯ ಆಂದೋಲನ ಸಂಘಟನೆಯು ಪಿಂಚಣಿ ಹೆಚ್ಚಳಕ್ಕೆ ಆಗ್ರಹಿಸಿ ಕಳೆದ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net