ಹೆಣ್ಣು ಭ್ರೂಣ ಹತ್ಯೆ ನಿಮೂರ್ಲನೆಗೆ ಕ್ರಮ

klr minister visit
ಬಂಗಾರಪೇಟೆ ತಾಲೂಕಿನ ಮಾಗೊಂದಿ ಗ್ರಾಮದಲ್ಲಿ ಗೃಹ ಆರೋಗ್ಯ ಕಾರ್ಯಕ್ರಮದ ಕುರಿತಾಗಿ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು.
Published on

ಬೂದಿಕೋಟೆ: ಐದು ಗ್ಯಾರಂಟಿಗಳ ಜತೆಗೆ ಬಡವರಿಗೆ ಒಳ್ಳೆಯ ಆರೋಗ್ಯ ಸೇವೆ ಒದಗಿಸಲು ಗೃಹ ಆರೋಗ್ಯ ಗ್ಯಾರಂಟಿಯನ್ನು ಸರ್ಕಾರ ನೀಡುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ ಹೇಳಿದರು.

ಬಂಗಾರಪೇಟೆ ತಾಲೂಕಿನ ಮಾಗೊಂದಿ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಗೃಹ ಆರೋಗ್ಯ ಕಾರ್ಯಕ್ರಮದ ಕಾರ್ಯಚಟುವಟಿಕೆ ವೀಕ್ಷಣೆ ಮತ್ತು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯಲ್ಲಿ ಮಾತನಾಡಿ, ಹೆಣ್ಣು ಮಗುವಿಗೆ ಒತ್ತು ನೀಡಬೇಕು ಎಂಬ ಉದ್ದೇಶದಿಂದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಆಚರಿಸಲಾಗುತ್ತಿದೆ. ಈ ಹಿಂದೆ ಹೆಣ್ಣು ಮಗು ಜನಿಸಿದರೆ ವ್ಯಥೆ ಪಡುತ್ತಿದ್ದರು. ಆದರೆ ಪ್ರಸ್ತುತ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಿಗುತ್ತಿರುವ ಸೌಲತ್ತುಗಳು ಗಂಡು ಮಕ್ಕಳಿಗೆ ಸಿಗದಂತ ವಾತಾವರಣ ನಿಮಾರ್ಣವಾಗಿದೆ. ಹೆಣ್ಣಿನ ಮೇಲಿನ ಕೀಳರಿಮೆಯಿಂದ ಇಂದಿಗೂ ಸಹ ಭ್ರೂಣ ಹತ್ಯೆಯಂತಹ ಹೀನ ಕೃತ್ಯಗಳು ನಡೆಯುತ್ತಿದ್ದು, ಅದನ್ನು ಸಂಪೂರ್ಣ ನಿಮೂರ್ಲನೆ ಮಾಡಬೇಕು. ಆದ್ದರಿಂದ ಹೆಣ್ಣು ಮಕ್ಕಳಿಗೆ ಅನೇಕ ಸರ್ಕಾರಿ ಯೋಜನೆಗಳನ್ನು ನೀಡಲಾಗುತ್ತಿದೆ ಎಂದರು.

ಶಾಸಕ ಎಸ್​.ಎನ್​. ನಾರಾಯಣಸ್ವಾಮಿ ಮಾತನಾಡಿ, ಗ್ರಾಮೀಣ ಭಾಗದ ಜನತೆಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಗೃಹ ಆರೋಗ್ಯ ಕಾರ್ಯಕ್ರಮ ಸಹಕಾರಿಯಾಗಿದೆ. ಬೂದಿಕೋಟೆ ವ್ಯಾಪ್ತಿಯು ಕರ್ನಾಟಕ, ಆಂಧ್ರ ಮತ್ತು ತಮಿಳುನಾಡಿನ ಗಡಿಗೆ ಹೊಂದಿಕೊಂಡಿರುವ ಕಾರಣ ಜನಸಂಖ್ಯೆ ಸಹ ಹೆಚ್ಚಿದ್ದಾರೆ. ಆದ್ದರಿಂದ ಬೂದಿಕೋಟೆ ಪ್ರಾಥಮಿಕ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ತಾಲೂಕು ಆಸ್ಪತ್ರೆಯನ್ನಾಗಿ ಮಾಡಬೇಕು. ಹಳೇ ಆಸ್ಪತ್ರೆಯ ಜಾಗವನ್ನು ಸಾರಿಗೆ ಇಲಾಖೆಗೆ ಹಸ್ತಾಂತರ ಮಾಡಿದರೆ ಬಸ್​ ನಿಲ್ದಾಣ ನಿರ್ಮಿಸಲು ಅನುಕೂಲವಾಗಲಿದೆ ಎಂದು ಸಚಿವರಿಗೆ ಮನವಿ ಮಾಡಿದರು.

ಆಯುಕ್ತ ಶಿವಕುಮಾರ್​, ರಾಷ್ಟ್ರೀಯ ಆರೋಗ್ಯ ಅಭಿಯಾನದ ಎಂಡಿ ಡಾ.ನವೀನ್​ ಭಟ್​, ನಿರ್ದೇಶಕಿ ತ್ರಿವೇಣಿ, ಕುಡಾ ಅಧ್ಯಕ್ಷ ಗೋಪಾಲರೆಡ್ಡಿ, ಪಿಎಲ್​ಡಿ ಬ್ಯಾಂಕ್​ ಅಧ್ಯಕ್ಷ ರಘುನಾಥ್​, ಗ್ರಾಪಂ ಅಧ್ಯಕ್ಷೆ ಅಮರಾವತಿ ಮುನೇಂದ್ರ, ಮುಖಂಡರಾದ ಎ.ಬಾಬು, ಕುಪೇಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net