ನೇರವಾಗಿ ಕೆಸಿ ವ್ಯಾಲಿ ನೀರು ಉಪಯೋಗಿಸಿದರೆ ಕ್ರಮ

kc vally
ಕೋಲಾರ ತಾಲೂಕಿನ ಗೌಡನಹಳ್ಳಿ ಸಮೀಪ ಕೆಸಿ ವ್ಯಾಲಿ ನೀರನ್ನು ಅಕ್ರಮವಾಗಿ ಎತ್ತುವಳಿ ಮಾಡುತ್ತಿದ್ದ ರೈತನ ಪಂಪು, ಮೋಟಾರನ್ನು ಟಾಸ್ಕ್​ ೋರ್ಸ್​ ಅಧಿಕಾರಿಗಳು ವಶಪಡಿಸಿಕೊಂಡರು.
Published on

ಕೋಲಾರ: ಕೆಸಿ ವ್ಯಾಲಿ ನೀರನ್ನು ಅಕ್ರಮವಾಗಿ ಎತ್ತುವಳಿ ಮಾಡುತ್ತಿದ್ದ ರೈತರ ತೋಟಗಳಿಗೆ, ಟಾಸ್ಕ್​ ೋರ್ಸ್​ ಅಧಿಕಾರಿಗಳು ಭೇಟಿ ನೀಡಿ, ನೇರವಾಗಿ ಉಪಯೋಗಿಸದಂತೆ ಎಚ್ಚರಿಕೆ ನೀಡಿದ್ದಾರೆ.

ತಾಲೂಕಿನ ಗೌಡನಹಳ್ಳಿ ಸೇರಿ ಕೆಸಿ ವ್ಯಾಲಿ ನೀರು ಹರಿದು ಹೋಗುತ್ತಿರುವ ಕಾಲುವೆಗಳಲ್ಲಿ ಮೋಟಾರು ಪಂಪು ಇಟ್ಟು ಬೆಳೆಗಳಿಗೆ ನೇರವಾಗಿ ಉಪಯೋಗಿಸಿಕೊಳ್ಳುತ್ತಿದ್ದರು. ಈ ಬಗ್ಗೆ ಜಲ ಸಂಪನ್ಮೂಲ ಇಲಾಖೆಯ ಅಧಿಕಾರಿಗಳಿಗೆ ಬಂದ ಖಚಿತ ಮಾಹಿತಿ ಮೇರೆಗೆ ಭೇಟಿ ನೀಡಿದ್ದು, ಇನ್ನು ಮುಂದೆ ಉಪಯೋಗಿಸದಂತೆ ನೋಟಿಸ್​ ಮೂಲಕ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಪದೇಪದೆ ನಿಯಮ ಉಲ್ಲಂಘಿಸುತ್ತಿದ್ದ 2 ಪಂಪ್​, ಮೋಟಾರು, 12 ಪೈಪ್​ ವಶಪಡಿಸಿಕೊಂಡಿದ್ದಾರೆ.

ಜಲ ಸಂಪನ್ಮೂಲ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂ.ಕೃಷ್ಣ ಮಾತನಾಡಿ, ಕೆಸಿ ವ್ಯಾಲಿ ಯೋಜನೆಯ ಮೂಲ ಉದ್ದೇಶ ಅಂತರ್ಜಲ ವೃದ್ಧಿಗಾಗಿ ಅನುಷ್ಠಾನಗೊಳಿಸಲಾಗಿದೆ. ಕೆರೆಗಳಲ್ಲಿ ಶೇಖರಣೆಯಾಗಿರುವ ನೀರು ಹಾಗೂ ಕೆರೆಗಳಿಗೆ ಹರಿಯುತ್ತಿರುವ ಕೆಸಿ ವ್ಯಾಲಿ ನೀರನ್ನು ರೈತರು ಅನಧಿಕೃತವಾಗಿ ಪಂಪು ಮೋಟಾರ್​ ಅಳವಡಿಸಿಕೊಂಡು ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಇದನ್ನು ತಡೆಗಟ್ಟು ಸಲುವಾಗಿ ಜಿಲ್ಲೆಯಲ್ಲಿ ಟಾಸ್ಕ್​ ಪೋರ್ಸ್​ ತಂಡವನ್ನು ರಚಿಸಲಾಗಿದೆ ಎಂದು ತಿಳಿಸಿದರು.

ಕೆಸಿ ವ್ಯಾಲಿ ಯೋಜನೆಗೆ ಒಳಪಡುವ ಕೆರೆಗಳ ಹಾಗೂ ಕಾಲುವೆಗಳ ಮೂಲಕ ಕೆಸಿ ವ್ಯಾಲಿ ನೀರು ಹರಿದು ಅಂತಿಮ ಕೆರೆ ತಲುಪದೇ ಯೋಜನೆಯು ಫಲಕಾರಿಯಾಗದೆ ವಿಫಲಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಆದ್ದರಿಂದ ರೈತರು ಕೆಸಿ ವ್ಯಾಲಿ ನೀರನ್ನು ಅನಧಿಕೃತವಾಗಿ ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳಬಾರದು ಎಂದು ಟಾಸ್ಕ್​ ಪೋರ್ಸ್​ ತಂಡ ಸಕ್ರೀಯವಾಗಿದೆ. ಅದರಂತೆ ತಂಡ ಕಾರ್ಯಾಚರಣೆ ನಡೆಸಿ, ಅನಧಿಕೃತವಾಗಿ ಕೆಸಿ ವ್ಯಾಲಿ ನೀರನ್ನು ಎತ್ತುವಳಿ ಮಾಡಿಕೊಳ್ಳುತ್ತಿರುವ ರೈತರಿಗೆ ನೋಟಿಸ್​ ನೀಡಿ ಎಚ್ಚರಿಕೆ ನೀಡಲಾಗಿದೆ ಎಂದರು.

ಕಾರ್ಯಾಚರಣೆಯಲ್ಲಿ ಸಹಾಯಕ ಇಂಜಿನಿಯರ್​ಗಳಾದ ಶಶಿಕುಮಾರ್​, ಕಾವ್ಯಲತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net