

ಕೆ.ಆರ್.ನಗರ: ಜನರು ನನಗೆ ನೀಡಿರುವ ಅಧಿಕಾರವನ್ನು ಕ್ಷೇತ್ರದ ಸಮಗ್ರ ಅಭಿವೃದ್ಧ್ದಿಗೆ ಪ್ರಾಮಾಣಿಕವಾಗಿ ವಿನಿಯೋಗಿಸುತ್ತೇನೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ತಾಲೂಕಿನ ಡೋರ್ನಹಳ್ಳಿ ಗ್ರಾಮದ ಸಂತ ಆಂತೋಣಿ ಚರ್ಚ್ ಬಳಿ ಅಲ್ಪ ಸಂಖ್ಯಾತರ ಇಲಾಖೆಯಿಂದ ಕೈಗೊಂಡಿರುವ 30ಲಕ್ಷ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ಚುನಾವಣಾ ಪೂರ್ವದಲ್ಲಿ ಗ್ರಾಮಸ್ಥರು ಕೋರಿದ ಮನವಿಯಂತೆ ಇಂದು ಅಭಿವೃದ್ಧಿ ಕಾಮಗಾರಿ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮದಲ್ಲಿ ಪಡಿತರ ವಿತರಣಾ ಕೇಂದ್ರ ಆರಂಭಿಸಲು ಕ್ರಮ ವಹಿಸಲಾಗುವುದು ಎಂದರು.
ಗ್ರಾಮಸ್ಥರು ಸಹಕಾರ ನೀಡಿದರೆ, ಇನ್ನಷ್ಟು ಅಭಿವೃದ್ಧಿ ಕಾರ್ಯಕೈಗೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಡೋರ್ನಹಳ್ಳಿ ಸಂತ ಆಂತೋಣಿ ಚರ್ಚ್‌ನ ಧರ್ಮಗುರು ಟಿ.ಎನ್.ಜೋಸೆಫ್, ಪ್ರವೀಣ್‌ಪೆದ್ರು, ಪಾರ್ವತಮ್ಮ, ಸಿದ್ದಪ್ಪ, ಮಾರ್ಚಹಳ್ಳಿ ಶಿವರಾಮ್, ಎಲ್.ಪಿ.ರವಿಕುಮಾರ್, ಬ.ಮ.ಗಿರೀಶ್, ಚೌರಪ್ಪ, ಶೇಖರ್, ಎಂ.ಎಸ್.ಮಹದೇವ್, ಎಂ.ಜೆ.ರಮೇಶ್, ಸೈಯದ್ ಜಾಬೀರ್ ಇನ್ನಿತರರು ಇದ್ದರು.