ದೇಶದ ಜನಪ್ರಿಯ ನಟ ಪ್ರಭಾಸ್​! ನಂತರದ ಸ್ಥಾನಗಳಲ್ಲಿ ಯಾರಿದ್ದಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ..

prabhas
Published on

ಮುಂಬೈ: 'ಕಲ್ಕಿ' ಚಿತ್ರದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಪ್ರಭಾಸ್ ಗೆ ಮತ್ತೊಂದು ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಓರ್ಮ್ಯಾಕ್ಸ್ ಮಾಧ್ಯಮ ಬಿಡುಗಡೆ ಮಾಡಿದ ದೇಶದ ಅತ್ಯಂತ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.

ಆರ್ಮ್ಯಾಕ್ಸ್ ಜೂನ್​ತಿಂಗಳ ಜನಪ್ರಿಯ ತಾರೆಯರ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ಪ್ರಭಾಸ್ ಅಗ್ರಸ್ಥಾನ ಕಾಪಾಡಿಕೊಂಡಿದ್ದಾರೆ. ಮೇ ತಿಂಗಳಲ್ಲಿ ಅಗ್ರಸ್ಥಾನದಲ್ಲಿದ್ದ ಪ್ರಭಾಸ್ ಜೂನ್‌ನಲ್ಲೂ ಅದೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ 2ನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ತಮಿಳಿನ ವಿಜಯ್​ 3ನೇ ಸ್ಥಾನದಲ್ಲಿದ್ದರೆ, ಅಲ್ಲು ಅರ್ಜುನ್ ಮತ್ತು ಎನ್‌ಟಿಆರ್ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ.

ಇನ್ನು 6ನೇ ಸ್ಥಾನದಲ್ಲಿ ಮಹೇಶ್​ಬಾಬು, 7ನೇ ಸ್ಥಾನದಲ್ಲಿ ಅಕ್ಷಯ್​ ಕುಮಾರ್​, 8ನೇ ಸ್ಥಾನದಲ್ಲಿ ಸಲ್ಮಾನ್​ ಖಾನ್​, 'ಗೇಮ್ ಚೇಂಜರ್' ಚಿತ್ರದ ಮೂಲಕ ಬರುತ್ತಿರುವ ರಾಮ್ ಚರಣ್ ಈ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದ್ದಾರೆ. ಹೃತಿಕ್​ ರೋಷನ್​ ಹತ್ತನೇ ಸ್ಥಾನದಲ್ಲಿದ್ದಾರೆ.

ಜನಪ್ರಿಯ ನಾಯಕಿಯರ ಪಟ್ಟಿಯಲ್ಲಿ ಆಲಿಯಾ ಭಟ್ ಅಗ್ರಸ್ಥಾನದಲ್ಲಿದ್ದರೆ, ಸಮಂತಾ ಮತ್ತು ದೀಪಿಕಾ ಪಡುಕೋಣೆ ನಂತರದ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.

ಪ್ರಭಾಸ್​ ಅಭಿನಯದ ಕಲ್ಕಿ ಈ ಚಿತ್ರವು 1000 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಶಾರುಖ್ ಖಾನ್ ಅವರ 'ಜವಾನ್' 'ಬುಕ್‌ಮೆಶೋ' ದಾಖಲೆಯನ್ನು ಹಿಂದಿಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net