ಕಳೆದ ಜೂನ್​ನಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಮಾಡಿ, ಇಂದು ಆಕೆಯ ಮೇಲೆ ಆ್ಯಸಿಡ್​ ಹಾಕಿದವ ಅರೆಸ್ಟ್​...

Acid Attack
Published on

ಹಾಪುರ: ಕಳೆದ ವರ್ಷ ಜೂನ್​ನಲ್ಲಿ ಅತ್ಯಾಚಾರಕ್ಕೆ ಒಳಗಾಗಿದ್ದ ಅಪ್ರಾಪ್ತೆಯೋರ್ವಳ ಮೇಲೆ ಇಂದು ಆ್ಯಸಿಡ್​ ದಾಳಿ ನಡೆದ ಘಟನೆ ಉತ್ತರ ಪ್ರದೇಶದ ಹಾಪುರದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ದಿಲ್ಶಾದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಅತ್ಯಾಚಾರ ಎಸಗಿದ್ದವನ ಕುಟುಂಬದವರು, ಸಂಬಂಧಿಕರು ನಮ್ಮ ಬಳಿ ಬಂದು ಪ್ರಕರಣವನ್ನು ಮುಂದುವರಿಸದಂತೆ ಒತ್ತಾಯಿಸಿದ್ದರು. ರಾಜಿ ಮಾತುಕತೆ ಆಡಿದ್ದರು. ಆದರೆ ನಾವು ಒಪ್ಪಿಕೊಂಡಿರಲಿಲ್ಲ ಎಂದು ಸಂತ್ರಸ್ತೆಯ ಕುಟುಂಬದವರು ತಿಳಿಸಿದ್ದಾರೆ.

ಅತ್ಯಾಚಾರ ಸಂತ್ರಸ್ತೆಯ ಕಾಲಿನ ಮೇಲೆ ಆ್ಯಸಿಡ್​ ಹಾಕಲಾಗಿದ್ದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.(ಪಿಟಿಐ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net