ಯುಪಿಎಸ್ಸಿಯಲ್ಲಿ ಜಿಲ್ಲೆಯ ಇಬ್ಬರ ಸಾಧನೆ

klr upsc
Madhavi R, A.Madhu
Published on

ಕೋಲಾರ: ಕೇಂದ್ರ ಲೋಕ ಸೇವಾ ಆಯೋಗವು 2024ರಲ್ಲಿ ನಡೆಸಿದ ಕೇಂದ್ರ ನಾಗರಿಕ ಸೇವಾ ಪರೀಕ್ಷಾ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು, ಜಿಲ್ಲೆಯಿಂದ ಇಬ್ಬರು ಉತ್ತಮ ರ್ಯಾಂಕ್​ ಪಡೆದುಕೊಂಡಿದ್ದಾರೆ.

ಕೋಲಾರ ತಾಲೂಕಿನ ಇರಗಸಂದ್ರ ಗ್ರಾಮದ ಎ.ಮಧು 544ನೇ ರ್ಯಾಂಕ್​ ಹಾಗೂ ಶ್ರೀನಿವಾಸಪುರ ಪಟ್ಟಣದ ಡಾ.ಮಾಧವಿ 446ನೇ ರ್ಯಾಂಕ್​ ಗಳಿಸಿ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ. ರೈತ ಹಾಗೂ ಶಿಕ್ಷಕರ ಕುಟುಂಬದ ಇಬ್ಬರು ಸತತ ಪ್ರಯತ್ನದಿಂದ ನಾಗರಿಕ ಸೇವೆ ಮಾಡಬೇಕು ಎಂಬ ಕನಸು ನನಸಾಗಿಸಿಕೊಂಡಿದ್ದಾರೆ.

ರೈತ ಮಗನ ಸಾಧನೆ:

ಇರಗಸಂದ್ರ ಗ್ರಾಮದ ರೈತ ಆನಂದ್​&ಸುಶೀಲಮ್ಮ ದಂಪತಿ ಪುತ್ರ ಎ.ಮಧು ಜಿಕೆವಿಕೆಯಲ್ಲಿ ಎಜಿಬಿಎಸ್ಸಿ ಪದವಿ ಪಡೆದುಕೊಂಡಿದ್ದು, ಇದರ ನಡುವೆಯೇ ಯುಪಿಎಸ್ಸಿ ಗುರಿ ಹೊಂದಿದ್ದರು. ಯಾವುದೇ ಕೋಚಿಂಗ್​ ಸೆಂಟರ್​ಗಳಿಗೆ ಹೋಗದೆ ದಿನಪತ್ರಿಕೆ ಹಾಗೂ ಪರೀೆಗೆ ಪೂರಕವಾಗಿರುವ ಪುಸ್ತಕಗಳನ್ನು ಓದಿಕೊಂಡೇ ಸತತ 3ನೇ ಪ್ರಯತ್ನದಲ್ಲಿ ಅಂತಿಮ ಗುರಿ ತಲುಪಿದ್ದಾರೆ. ಮಧು ಪ್ರಾಥಮಿಕ ಶಿಕ್ಷಣವನ್ನು ಇರಗಸಂದ್ರ, ಕೆಂಬೋಡಿ ಶಾಲೆಯಲ್ಲಿ ಮಾಡಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಎನಿಗದಲೆ ನವೋದಯ ಶಾಲೆಯಲ್ಲಿ ಎಸ್​ಎಸ್​ಎಲ್​ಸಿ, ಕೋಲಾರದ ವಿದ್ಯಾ ಜ್ಯೋತಿ ಕಾಲೇಜಿನಲ್ಲಿ ಪಿಯುಸಿ ಹಾಗೂ ಜಿಕೆವಿಕೆ ಮಹಾವಿದ್ಯಾಲಯದಲ್ಲಿ ಎಜಿಬಿಎಸ್ಸಿ ಪಡೆದುಕೊಂಡಿದ್ದಾರೆ.

ಶಿಕ್ಷಕರ ಮಗಳಿಗೆ 446ನೇ ರ್ಯಾಂಕ್​:

ಶ್ರೀನಿವಾಸಪುರ ನಿವಾಸಿಗಳಾದ ಡಾ.ಆರ್​.ರವಿ ಕುಮಾರ್​ ಹಾಗೂ ಎಸ್​.ಎನ್​.ನಂದಿನಿ ಶಿಕ್ಷಕರಾಗಿದ್ದು, ಮಗಳು ಡಾ.ಮಾಧವಿ ಯುಪಿಎಸ್ಸಿಯಲ್ಲಿ 446ನೇ ರ್ಯಾಂಕ್​ಗಳಿಸಿದ್ದಾರೆ. ಡಾ.ಆರ್​.ರವಿ ಕುಮಾರ್​ ಮುತಕಪಲ್ಲಿಯಲ್ಲಿ ಮುಖ್ಯ ಶಿಕ್ಷಕ ಹಾಗೂ ನಂದಿನಿ ಜೋಡಿ ಲಕ್ಷಿ$್ಮಸಾಗರ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಡಾ.ಮಾಧವಿ ಅವರ ಪ್ರಾಥಮಿಕ ಶಿಕ್ಷಣ ಶೈಲೇಂದ್ರ, ಎಸ್​ಎಸ್​ಎಲ್​ಸಿ ವೇಣು ವಿದ್ಯಾಸಂಸ್ಥೆ, ಪಿಯುಸಿ ಕೋಲಾರದ ಸಹ್ಯಾದ್ರಿ ಕಾಲೇಜಿನಲ್ಲಿ ಮುಗಿಸಿ, ಬೆಂಗಳೂರಿನ ಇಎಸ್​ಐ ವೈದ್ಯಕಿಯ ಮಹಾವಿದ್ಯಾಲಯದಲ್ಲಿ ಎಂಬಿಬಿಎಸ್​ ಪದವಿ ಪಡೆದುಕೊಂಡಿದ್ದು, ಆನ್​ಲೈನ್​ ಕೋಚಿಂಗ್​ ಪಡೆದುಕೊಂಡು ಯುಪಿಎಸ್ಸಿ ಗುರಿ ಸಾಧಿಸಿದ್ದಾರೆ.

ದೊಡ್ಡಪ್ಪ ಶ್ರೀನಿವಾಸಪುರ ತಹಸೀಲ್ದಾರ್​ ಆಗಿದ್ದರು. ಅವರ ಮಾರ್ಗದರ್ಶನದಲ್ಲಿ ನಾವೂ ಶಿಕ್ಷಕರಾಗಿದ್ದೇವೆ, ಅದೇ ಹಾದಿಯಲ್ಲಿ ಮಗಳಿಗೂ ಸಲಹೆ ನೀಡಲಾಗುತ್ತಿತ್ತು. ಶೈಕ್ಷಣಿಕವಾಗಿ ಪ್ರೋತ್ಸಾಹ ನೀಡಲಾಗುತ್ತಿದ್ದು, ಆಸಕ್ತಿ ಇರುವ ಕ್ಷೇತ್ರದಲ್ಲಿ ಮುಂದುವರಿದು ಮಗಳು ಸಾಧನೆ ಮಾಡಿದ್ದಾಳೆ. ಪಿಯುಸಿ ಓದುತ್ತರುವಾಗಲೇ ಯುಪಿಎಸ್ಸಿಗೆ ಸೇರಬೇಕು ಎಂಬ ಕನಸು ಇಟ್ಟುಕೊಂಡಿದ್ದಳು, ಪಿಯು, ಸಿಇಟಿ ಪರೀೆಯಲ್ಲಿ ಉತ್ತಮ ಲಿತಾಂಶ ಬಂದ ಹಿನ್ನೆಲೆಯಲ್ಲಿ ವೈದ್ಯಕಿಯ ಕ್ಷೇತ್ರ ಆಯ್ಕೆ ಮಾಡಿಕೊಂಡಳು. ಜತೆಗೆ ಯುಪಿಎಸ್ಸಿಯಲ್ಲಿ 446ನೇ ರ್ಯಾಂಕ್​ ಗಳಿಸಿದ್ದು, ಯಾವುದೇ ಸೇವೆಯಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ಸಿಕ್ಕಿದರೂ ಖುಷಿ ಇದೆ ಎಂದು ತಂದೆ ಡಾ.ಆರ್​.ರವಿಕುಮಾರ್​ ಸಂತಸ ವ್ಯಕ್ತಪಡಿಸಿದರು.

ಕೋಟ್..

ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗಲೆ ಯುಪಿಎಸ್ಸಿ ಪರೀೆ ಬರೆಯಬೇಕು ಎಂಬ ಗುರಿ ಹೊಂದಿದ್ದೆ. ಕ್ರಿಯಾ ಯೋಜನೆ ರೂಪಿಸಿಕೊಂಡು ಪರೀೆಗೆ ತಯಾರಾದೆ. ಎರಡು ಪ್ರಯತ್ನದಲ್ಲಿ ವಿಲವಾದರೂ ಮೂರನೇ ಪ್ರಯತ್ನದಲ್ಲಿ ಯಶಸ್ಸು ಸಿಕ್ಕಿದೆ. ಸಮಾಜದಲ್ಲಿ ಜನ ಯಾವ ಯಾವ ರೀತಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂಬುದನ್ನು ಬಹಳ ಹತ್ತಿರದಿಂದ ಬಲ್ಲವನಾಗಿದ್ದೇನೆ. ಯಾವ ಕ್ಷೇತ್ರದಿಂದ ಬಂದರೆ ಜನರ ಸೇವೆ ಮಾಡಬಹುದು ಎಂದು ಯೋಚಿಸಿದಾಗ ಸಿಕ್ಕಿದ್ದು, ಯುಪಿಎಸ್ಸಿ ಆಯ್ಕೆ. ಆದ್ದರಿಂದ ಈ ಹಾದಿಯಲ್ಲಿ ನಿವೃತ್ತ ಐಎಎಸ್​ ಅಧಿಕಾರಿ ಅಜಿತ್​ ಅವರು ಸ್ಫೂರ್ತಿಯಾಗಿದ್ದು, ಸಾಧನೆಗೆ ಸಹಕಾರಿಯಾಗಿದೆ

- ಎ.ಮಧು, ಯುಪಿಎಸ್​ಸಿ 544ನೇ ರ್ಯಾಂಕ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net