ಶ್ರಮವಿಲ್ಲದೆ ಸಾಧನೆ ಸಾಧ್ಯವಿಲ್ಲ: ಡಾ. ಪಿ.ವಿ ಪದ್ಮಜಾ

WhatsApp Image 2025-08-12 at 18.35.03 (3)
Published on

ಬೆಂಗಳೂರು: ಉಳಿಪೆಟ್ಟು ತಿಂದು ಕಲ್ಲು ಸುಂದರ ಶಿಲ್ಪವಾದಂತೆ ವಿದ್ಯಾರ್ಥಿಗಳು ಶ್ರಮಪಟ್ಟು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಬೇಕು ಎಂದು ಎಂ.ಎಲ್.ಎ. ಅಕಾಡೆಮಿ ಹೈಯರ್ ಲರ್ನಿಂಗ್ ಸಂಸ್ಥೆಯ ಪ್ರಾಂಶುಪಾಲರಾದ ಡಾ. ಪಿ.ವಿ ಪದ್ಮಜಾ ಹೇಳಿದರು.

ಮಲ್ಲೇಶ್ವರದಲ್ಲಿರುವ ಲಕ್ಷ್ಮೀ ಅಮ್ಮಣ್ಣಿ ಮಹಿಳಾ ಕಾಲೇಜಿನಲ್ಲಿ 2025-26 ನೇ ಶೈಕ್ಷಣಿಕ ಸಾಲಿನ ಪದವಿಯ ನೂತನ ವಿದ್ಯಾರ್ಥಿಗಳಿಗೆ ನಡೆದ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಶ್ರಮವಿಲ್ಲದೆ ಸಾಧನೆ ಸಾಧ್ಯವಿಲ್ಲ. ಇದನ್ನು ಅರಿತುಕೊಂಡು ವಿದ್ಯಾರ್ಥಿಗಳು ಮುನ್ನಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಇದೇ ವೇಳೆ ಪ್ರಾಂಶುಪಾಲರಾದ ಡಾ.ಶರ್ಮಿಷ್ಠ ದತ್ತ ಅವರು ನೂತನವಾಗಿ ಆಯ್ಕೆಗೊಂಡ ಕಾಲೇಜಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.

ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿಯಾದ ಡಾ.ಅನ್ನದಾನೇಶ್, ಬಿ.ಎ.ಮುಖ್ಯ ಆಡಳಿತಾಧಿಕಾರಿಗಳಾದ ಗಂಗಾಧರ ಮೂರ್ತಿ ಮತ್ತು ಪಿ.ಯು.ಸಿ. ಪ್ರಾಂಶುಪಾಲರಾದ ವಾದಿರಾಜ್ ಮಾನ್ವಿ ಸೇರಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net