ಅ.25ರಂದು ಆಚಾರ್ಯತ್ರಯರ ಜಯಂತಿ: ನಟರಾಜ್ ಭಾಗವತ್

nataraj bhagawat
ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಕೆ.ಸಿ.ನಟರಾಜ್ ಭಾಗವತ್
Published on

ಶಿವಮೊಗ್ಗ: ಜಿಲ್ಲಾ ಬ್ರಾಹ್ಮಣ ಮಹಾಸಭಾದಿಂದ ಅ.25ರಂದು ಬಿ.ಎಚ್.ರಸ್ತೆಯ ಶ್ರೀ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಆಚಾರ್ಯತ್ರಯರ ಜಯಂತಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಕೆ.ಸಿ.ನಟರಾಜ್ ಭಾಗವತ್ ಹೇಳಿದರು.

ಆಚಾರ್ಯರು ಪ್ರತಿಪಾದಿಸಿದ ಸಿದ್ಧಾಂತ ಹಾಗೂ ಸಂದೇಶಗಳನ್ನು ಜನರಿಗೆ ತಲುಪಿಸುವ ಸದುದ್ದೇಶದಿಂದ ಮಹಾಸಭಾ ಕಳೆದ 5 ವರ್ಷಗಳಿಂದ ಆಚಾರ್ಯತ್ರಯರ ಜಯಂತಿ ಆಚರಿಸುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಉಡುಪಿ ಆಸೆಮ್ಸ್ ಶಿಕ್ಷಣ ಸಂಸ್ಥೆ ಪ್ರಾಚಾರ್ಯ, ಯಕ್ಷಗಾನ ಪ್ರಸಂಗಗಳ ರಚನೆಕಾರ ಮತ್ತು ತಾಳಮದ್ದಲೆಯ ಅರ್ಥಧಾರಿ ಪ್ರೊ. ಪವನ್ ಕಿರಣ್ ರೈ ಉಪನ್ಯಾಸ ನೀಡುವರು. ನವರಾತ್ರಿ ಪ್ರಯುಕ್ತ ವಿಪ್ರ ಮಹಿಳೆಯರಿಗಾಗಿ ಏರ್ಪಡಿಸಿದ್ದ ದೇವಿ ಕುರಿತ ಗೀತಗಾಯನ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದರು. ಮಹಾಸಭಾ ಕಾರ್ಯದರ್ಶಿ ಬಿ.ಕೆ.ವೆಂಕಟೇಶಮೂರ್ತಿ, ಪದಾಧಿಕಾರಿಗಳಾದ ಕೇಶವಮೂರ್ತಿ, ಡಾ. ನಾಗಮಣಿ, ಸರಳ ಹೆಗ್ಗಡೆ, ಎಂ.ಎಸ್.ಸೂರ್ಯನಾರಾಯಣ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net