18ಕ್ಕೆ ಎಟಿಎನ್‌ಸಿ ಕಾಲೇಜಿನಲ್ಲಿ ಆಚಾರ್ಯ ಅದ್ವಿತೀಯ

ATNCC Flash mob dance
ಎಟಿಎನ್‌ಸಿ ಕಾಲೇಜಿನಲ್ಲಿ ಆಚಾರ್ಯ ಅದ್ವಿತೀಯ ಉತ್ಸವದ ಲೋಗೊ ಅನಾವರಣದ ವೇಳೆ ವಿದ್ಯಾರ್ಥಿನಿಯರು ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
Published on

ಶಿವಮೊಗ್ಗ: ರಾಷ್ಟ್ರೀಯ ಶಿಕ್ಷಣ ಸಮಿತಿಯ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನಲ್ಲಿ ಮೇ 18ರಂದು ಕಾಲೇಜಿನ ಆವರಣದಲ್ಲಿ ಆಚಾರ್ಯ ಅದ್ವಿತೀಯ ರಾಜ್ಯಮಟ್ಟದ ಸಾಂಸ್ಕೃತಿಕ ಮತ್ತು ನಿರ್ವಹಣಾ ಉತ್ಸವ ಏರ್ಪಡಿಸಲಾಗಿದೆ ಎಂದು ಕಾಲೇಜಿನ ಪ್ರಾಚಾರ್ಯೆ ಪ್ರೊ. ಪಿ.ಆರ್.ಮಮತಾ ಹೇಳಿದರು.

ಮೇ 18ರ ಬೆಳಗ್ಗೆ 10ಕ್ಕೆ ಕುವೆಂಪು ವಿಶ್ವವಿದ್ಯಾಲಯ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಕಾರ್ಯಕ್ರಮ ಉದ್ಘಾಟಿಸುವರು. ಕುಲಸಚಿವ ಎ.ಎಲ್.ಮಂಜುನಾಥ, ಎನ್‌ಇಎಸ್ ಅಧ್ಯಕ್ಷ ಜಿ.ಎಸ್.ನಾರಾಯಣರಾವ್, ಕಾರ್ಯದರ್ಶಿ ಎಸ್.ಎನ್.ನಾಗರಾಜ, ಸಹ ಕಾರ್ಯದರ್ಶಿ ಡಾ. ಪಿ.ನಾರಾಯಣ್ ಮುಖ್ಯ ಅತಿಥಿಗಳಾಗಿರುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಜೆ ಸಮಾರೋಪ ನಡೆಯಲಿದ್ದು, ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಪ್ರೊ. ವಿಷ್ಣುಮೂರ್ತಿ, ಕುವೆಂಪು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್.ಎಂ.ಗೋಪಿನಾಥ, ಉದ್ಯಮಿ ನಿವೇದನ ನೆಂಪೆ, ವೈದ್ಯ ಡಾ. ರಾಹುಲ್ ದೇವರಾಜ, ಎನ್‌ಇಎಸ್ ಖಜಾಂಚಿ ಡಿ.ಜಿ.ರಮೇಶ್, ನಿರ್ದೇಶಕ ಅಶ್ವಥನಾರಾಯಣ ಶೆಟ್ಟಿ ಪಾಲ್ಗೊಳ್ಳುವರು ಎಂದರು.
ರಾಜ್ಯದ 30-40 ಕಾಲೇಜುಗಳ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ಬೆಸ್ಟ್ ಮ್ಯಾನೇಜರ್, ಮಾರ್ಕೆಟಿಂಗ್, ಎಚ್‌ಆರ್, ಫೈನಾನ್ಸ್, ಹಾಡು, ನೃತ್ಯ, ರೀಲ್ಸ್, ಚಿತ್ರಕಲೆ, ಸ್ಟಾಂಡ್ ಅಪ್ ಕಾಮಿಡಿ ಸೇರಿ 10 ವಿವಿಧ ಸಾಂಸ್ಕೃತಿಕ ಮತ್ತು ನಿರ್ವಹಣಾ ಸ್ಪರ್ಧೆ ಆಯೋಜಿಸಲಾಗಿದೆ. ಏಕಕಾಲಕೆ ನಾಲ್ಕು ವೇದಿಕೆಗಳಲ್ಲಿ ಸ್ಪರ್ಧೆಗಳು ನಡೆಯಲಿವೆ ಎಂದು ತಿಳಿಸಿದರು. ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ. ಎಸ್.ಜಗದೀಶ್, ಪ್ರೊ. ಕೆ.ಎಂ.ನಾಗರಾಜ, ಪ್ರೊ. ಎನ್.ಮಂಜುನಾಥ, ಪ್ರೊ. ಜಿ.ರವಿಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.

ಸಮಗ್ರ ಪ್ರಶಸ್ತಿ 10 ಸಾವಿರ ರೂ.
ಪ್ರತಿ ಸ್ಪರ್ಧೆಗೂ ಎರಡು ಪ್ರಶಸ್ತಿ ನೀಡಲಾಗುವುದು. ಸಮಗ್ರ ಪ್ರಶಸ್ತಿ ಪಡೆಯುವ ತಂಡಕ್ಕೆ 10 ಸಾವಿರ ರೂ. ಪ್ರೋತ್ಸಾಹ ಧನ, ಟ್ರೋಫಿ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು. ಇದೇ ವೇಳೆ ಕಾಲೇಜಿನಲ್ಲಿ ಆಚಾರ್ಯ ಅದ್ವಿತೀಯ ಉತ್ಸವದ ಲೋಗೊ ಅನಾವರಣಗೊಳಿಸಲಾಯಿತು. ವಿದ್ಯಾರ್ಥಿಗಳು ವಿವಿಧ ಹಾಡುಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net