ಕೊಠಾರಿಯಲ್ಲಿ ಮತಾಂತರ ಆರೋಪ

CRIME
Published on

ಕಡಬ: ಕೋಡಿಂಬಾಳದ ಕೊಠಾರಿ ಎಂಬಲ್ಲಿ ಹಿಂದು ಮಹಿಳೆ ಮನೆಯಲ್ಲಿ ಅನ್ಯಕೋಮಿನ ಪುರುಷ ಪತ್ತೆಯಾಗಿದ್ದು, ಆತನನ್ನು ಶುಕ್ರವಾರ ಮುಂಜಾನೆ ಸ್ಥಳೀಯ ಹಿಂದು ಸಂಘಟನೆ ಕಾರ್ಯಕರ್ತರು ಪೋಲಿಸ್ ವಶಕ್ಕೆ ಒಪ್ಪಿಸಿದ್ದಾರೆ.

ಕೊಠಾರಿ ಎಂಬಲ್ಲಿ ವಾಸವಿರುವ ಮಹಿಳೆ ಮನೆಯಲ್ಲಿ ಆತ ತಂಗಿರುವ ವಿಚಾರ ಬೆಳಕಿಗೆ ಬಂದಿದ್ದು, ಮಹಿಳೆಯನ್ನು ಮತಾಂತರ ಮಾಡುವ ಉದ್ದೇಶದಿಂದ ಹಲವಾರು ಸಮಯಗಳಿಂದ ಪ್ರಯತ್ನಗಳು ನಡೆದಿದೆ ಎನ್ನಲಾಗಿದೆ. ಇದಕ್ಕೆ ಪೂರಕ ಸಾಕ್ಷಾೃಧಾರಗಳು ದೊರೆತಿರುವುದರಿಂದ ಮಹಿಳೆ ಮನೆಗೆ ಕಡಬ ಸಂಘಟನೆ ಕಾರ್ಯಕರ್ತರು ಭೇಟಿ ಮಾಡಿ ಮನವೊಲಿಸಿದ್ದರು. ಈತ ಹಲವು ಸಮಯದಿಂದ ಮಹಿಳೆ ಮನೆಗೆ ಬರುತ್ತಿರುವುದು ಸಂಘಟನೆಯವರ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಫೆ.11ರಂದು ಮುಂಜಾನೆ ಈತನನ್ನು ಪೊಲೀಸ್ ವಶಕ್ಕೆ ನೀಡಲಾಗಿದೆ.

ಆ್ಯಸಿಡ್ ದಾಳಿಗೊಳಗಾಗಿದ್ದ ಮಹಿಳೆ: ವರ್ಷದ ಹಿಂದೆ ಜಿಲ್ಲೆಯನ್ನೇ ತಲ್ಲಣಗೊಳಿಸಿದ್ದ ಆ್ಯಸಿಡ್ ದಾಳಿಗೊಳಗಾದ ಸಂತ್ರಸ್ತೆಯನ್ನೇ ಮತಾಂತರಗೊಳಿಸಲು ಯತ್ನಿಸಲಾಗಿದೆ. ತನ್ನ ಭಾವನಿಂದ ಜಾಗದ ತಕರಾರು, ಮಾನಭಂಗ ಯತ್ನ ವಿಚಾರ ಸಂಬಂಧ ಮಹಿಳೆ ಮೇಲೆ ಆ್ಯಸಿಡ್ ಎರಚಲಾಗಿತ್ತು. ಮಹಿಳೆಯ ಭಾವ ಪೊಲೀಸರಿಂದ ಬಂಧಿತನಾಗಿ, ಬಳಿಕ ಜಾಮೀನು ಲಭಿಸಿತ್ತು. ಜಾಮೀನು ರದ್ದು ಕೋಡಿ ಮಹಿಳೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದನ್ನು ಪುರಸ್ಕರಿಸಿದ ನ್ಯಾಯಾಲಯ ಕೆಳ ನ್ಯಾಯಾಲಯ ನೀಡಿದ ಜಾಮೀನನ್ನು ರದ್ದುಗೊಳಿಸಿತ್ತು. ಆ್ಯಸಿಡ್ ದಾಳಿ ಪ್ರಕರಣದಲ್ಲಿ ಕರ್ತವ್ಯ ಲೋಪ ಆರೋಪದಲ್ಲಿ ಕಡಬ ಠಾಣೆ ಎಎಸ್‌ಐ ಅಮಾನತಿಗೆ ಒಳಗಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net