

ಶಿವಮೊಗ್ಗ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಶಿವಮೊಗ್ಗದ ಜೈಲಿನಲ್ಲಿದ್ದ ವಿಚಾರಣಾಧೀನ ಕೈದಿ, ಪ್ರಕರಣದ 12ನೇ ಆರೋಪಿ ಲಕ್ಷ್ಮಣ್ ಮಂಗಳವಾರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಇನ್ನೋರ್ವ ಎ-6 ಜಗದೀಶ್ ಪರವಾಗಿ ಯಾರೂ ಶ್ಯೂರಿಟಿ ನೀಡದೆ ಇರುವುದರಿಂದ ಆತ ಜೈಲಿನಲ್ಲೇ ಉಳಿಯುವಂತಾಗಿದೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ನಟ ದರ್ಶನ ಹಾಗೂ ಪ್ರಕರಣದ ಇತರ ಆರೋಪಿಗಳನ್ನು ರಾಜ್ಯದ ಬೇರೆ ಬೇರೆ ಕಾರಾಗೃಹಗಳಿಗೆ ಸ್ಥಳಾಂತರಿಸಲಾಗಿತ್ತು. ಆ ಪೈಕಿ ಲಕ್ಷ್ಮಣ್ ಹಾಗೂ ಜಗದೀಶ್ ಅವರನ್ನು ಶಿವಮೊಗ್ಗ ಜೈಲಿಗೆ ಕಳಿಸಲಾಗಿತ್ತು. ಈಗ ಆರೋಪಿ ಲಕ್ಷ್ಮಣ್‌ಗೆ ರಾಜಕುಮಾರ್ ಎಂಬುವವರು ಶ್ಯೂರಿಟಿ ನೀಡಿದ್ದರಿಂದ ಆತ ಜೈಲಿನಿಂದ ಹೊರಬಂದಂತಾಗಿದೆ.
ಆದರೆ ದರ್ಶನ್ ಅಭಿಮಾನಿ ಸಂಘದ ಪ್ರಮುಖನಾಗಿರುವ ಚಿತ್ರದುರ್ಗದ ಜಗದೀಶ್‌ಗೆ ಶ್ಯೂರಿಟಿ ನೀಡುವವರು ಇಲ್ಲದ ಕಾರಣ ಜೈಲು ವಾಸ ಮುಂದುವರಿದಿದೆ.