ಆತ್ಯಾಚಾರ ಪ್ರಕರಣದ ಆರೋಪಿ ದುಬೈನಲ್ಲಿ ಸೆರೆ: ಖಾಕಿ ಬಲೆಗೆ ಸಿಲುಕಿದ್ದೆ ರೋಚಕ

arrested
Published on

ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ದುಬೈನಲ್ಲಿ ತಲೆಮರೆಸಿಕೊಂಡಿದ್ದ ಖಾಸಗಿ ಕಂಪನಿ ನೌಕರನನ್ನು ಸಿಬಿಐ ಇಂಟರ್‌ಪೋಲ್ ಸಹಾಯದಿಂದ ಆರೋಪಿಯನ್ನು ಮಹದೇವಪುರ ಪೊಲೀಸರು ಬಂಧಿಸಿದ್ದಾರೆ. ಕೇರಳದ ಕೊಚ್ಚಿ ಮೂಲದ ಮಿದುನ್ ಚಂದ್ರನ್ (30) ಬಂಧಿತ.

ಮಹದೇವಪುರದಲ್ಲಿನ ಖಾಸಗಿ ಕಂಪನಿಯಲ್ಲಿ 2016ರಲ್ಲಿ ಮಿದುನ್ ಚಂದ್ರನ್ ಕೆಲಸಕ್ಕೆ ಸೇರಿ ಬಿಟಿಎಂ ಲೇಔಟ್ 1ನೇ ಹಂತದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ.ಅದೇ ಕಂಪನಿಯ ಸಹೋದ್ಯೋಗಿ ಯುವತಿಯನ್ನು ಪರಿಚಯ ಮಾಡಿಕೊಂಡು ಪ್ರೀತಿಸುವ ನಾಟಕ ಮಾಡಿದ್ದ. ಮದುವೆ ಆಗುವುದಾಗಿ ಭವರಸೆ ಕೊಟ್ಟು ತನ್ನ ಮನೆಗೆ ಆಕೆಯನ್ನು ಕರೆದೊಯ್ದು ಬಲವಂತವಾಗಿ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದ. ಇದಲ್ಲದೆ, ಸಂತ್ರಸ್ತೆ ನೆಲೆಸಿದ್ದ ಉದಯನಗರಕ್ಕೂ ಹೋಗಿ ಅಲ್ಲಿಯೂ ಆಕೆಯ ಜತೆಗೆ ಖಾಸಗಿ ಕ್ಷಣಗಳನ್ನು ಕಳೆದಿದ್ದ. ತನ್ನ ತಾಯಿಯನ್ನು ಪರಿಚಯ ಮಾಡಿಕೊಟ್ಟ ಆರೋಪಿಯೂ ತುರ್ತಾಗಿ ಹಣ ಬೇಕೆಂದು ಸಂತ್ರಸ್ತೆಗೆ ಹೇಳಿ ಹಣ ಪಡೆದುಕೊಂಡಿದ್ದ. ಕೆಲ ದಿನಗಳ ಬಳಿಕ ಮದುವೆ ಆಗುವಂತೆ ಯುವತಿ ಒತ್ತಾಯ ಮಾಡಿದಾಗ ನಿರಾಕರಿಸಿದ್ದ.

ಪ್ರತಿದಿನ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಟ್ಟು ಯುವತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಒಡ್ಡಿದ್ದ. ನೊಂದ ಯುವತಿ, ಮಹದೇವಪುರ ಪೊಲೀಸ್ ಠಾಣೆಗೆ 2020ರ ದೂರು ಸಲ್ಲಿಸಿದ್ದರು. ಅತ್ಯಾಚಾರ ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು, ಆರೋಪಿ ಬಂಧನಕ್ಕೆ ಬಲೆಬೀಸಿದ್ದರು. ಅಷ್ಟರಲ್ಲಿ ನಿರೀಕ್ಷಣಾ ಜಾಮೀನು ಪಡೆದು ಮಿದುನ್ ಚಂದ್ರನ್, ಕೋರ್ಟ್‌ಗೆ ಗೈರು ಹಾಕಿದ್ದ. ಈತನ ಬಂಧನಕ್ಕೆ ಕೋರ್ಟ್ ಬಂಧನ ಸಹಿತ ವಾರಂಟ್ ಜಾರಿ ಮಾಡಿತ್ತು. ಅಷ್ಟರಲ್ಲಿ ಮಿದುನ್ ದುಬೈಗೆ ಪರಾರಿಯಾಗಿ ಸ್ಥಳೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ.

ವಿಷಯ ತಿಳಿದ ಬೆಂಗಳೂರು ನಗರ ಪೊಲೀಸರು, ಸಿಬಿಐ ಮೂಲಕ ಇಂಟರ್ ಪೋನ್‌ಗೆ ಆರೋಪಿಯ ವಿರುದ್ಧದ ದಾಖಲೆ ಪತ್ರಗಳನ್ನು ಒದಗಿಸಿ ರೆಡ್ ಕಾರ್ರನರ್ ಹೊರಡಿಸಿತ್ತು. ಇದರ ಆಧಾರದ ಮೇಲೆ ವಿದೇಶಾಂಗ ಇಲಾಖೆ ಮತ್ತು ಅಬುಧಾಬಿ ಸ್ಥಳೀಯ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿ ಭಾರತಕ್ಕೆ ಗಡಿಪಾರು ಮಾಡಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ಕರೆತಂದಿರುವ ಮಹದೇವಪುರ ಪೊಲೀಸರು, ಕೋರ್ಟ್‌ಗೆ ಹಾಜರುಪಡಿಸಿ ಕಸ್ಟಡಿಗೆ ಪಡೆಯಲು ಮುಂದಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net