'ಅನಿಮಲ್​​' ಬಾಬಿ ಡಿಯೋಲ್​​ ಆಸ್ತಿ ಕೇಳಿದ್ರೆ ಶಾಕ್ ಆಗ್ತೀರಾ..! ಕಾರ್​​ ​​​, ಮನೆ, ಭವ್ಯ ಬಂಗಲೆ, ತಿಂಗಳಿಗೆ ಸೋಷಿಯಲ್​ ಮೀಡಿಯಾದ ಆದಾಯ ಎಷ್ಟಿದೆ ಗೊತ್ತಾ..?!

aniiiimmmmmmm
Published on

ಜಮಾಲ್​​​​ ಕುಡು ಹಾಡಿನ ಮೂಲಕ ಅನಿಮಲ್​ ಚಿತ್ರದಲ್ಲಿ ಫೇಮಸ್​​ ಆಗಿದ್ದು ಅಂದ್ರೆ ಬಾಬಿ ಡಿಯೋಲ್​​​. ಡಿ.1 ರಂದು ಬಿಡುಗಡೆಯಾದ ಸಂದೀಪ್‌ ರೆಡ್ಡಿ ವಂಗಾ ನಿರ್ದೇಶನದ ʼಅನಿಮಲ್ʼ ಮೂವಿ ಈಗಾಗಲೇ 300 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಇದೇ ವೇಳೆ ಈ ಸಿನಿಮಾದಲ್ಲಿ ನಟಿಸಿದ ನಟಿ ನಟಿಯರ ಸಂಭಾವನೆಯೂ ದೊಡ್ಡ ಮೊತ್ತವಾಗಿದೆ.

ಚಿತ್ರದ ಜಮಾಲ್​ ಕುಡು ಹಾಡಿಗೆ ವೈನ್​ ಬಾಟಲ್​ ಒಂದನ್ನ ತಲೆಯ ಮೇಲೆ ಇಟ್ಟುಕೊಂಡು ಸ್ಟಪ್​​ ಹಾಕಿದ ಬಾಬಿ ಡಿಯೋಲ್ ಮತ್ತೊಂದು ಹಂತಕ್ಕೆ ಫೇಮಸ್​​ ಆಗಿದ್ದಾರೆ. ಇದೀಗ ಬಾಬಿ ಡಿಯಾಲ್​ ಅಸ್ತಿಯ ಬಗ್ಗೆ ಒಂದಿಷ್ಟು ಚರ್ಚೆಯಾಗತೊಡಗಿದೆ. ಅನಿಮಲ್‌ ಸಿನಿಮಾದಲ್ಲಿ ವಿಲನ್‌ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಾಬಿ ಡಿಯೋಲ್ ಸಂಭಾವನೆ ಈ ಚಿತ್ರದಲ್ಲಿ ನಟಿಸಲು ಬರೋಬ್ಬರಿ 4 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ.

ಹಾಗಿದ್ರೆ ಬಾಬಿ ಡಿಯೋಲ್​ ಒಟ್ಟು ಆಸ್ತಿ ಎಷ್ಟಿದೆ ಗೊತ್ತಾ?
ಅದನ್ನ ಹೊರತು ಪಡಿಸಿ ಬಾಬಿ ಡಿಯೋಲ್​ ಒಟ್ಟು ಆಸ್ತಿ 66 ಕೋಟಿ ರೂಪಾಯಿ. ಅಂದ್ರೆ ಬಾಬಿ ಡಿಯೋಲ್​ ಒಂದು ವರ್ಷಕ್ಕೆ 6 ಕೋಟಿಯಷ್ಟು ಗಳಿಕೆಯನ್ನ ಸಿನಿಮಾ ಮತ್ತು ಸೋಷಿಯಲ್​ ಮೀಡಿಯಾ, ಅಡ್ವಟ್ಐಸ್ಮೆಂಟ್​​​ಗಳಿಂದ ಪಡೆಯುತ್ತಾರೆ.

8.5 ಕೋಟಿ ಬೆಲೆ ಬಾಳುವ ವಿಭಿನ್ನ ಕಾರ್​​​ಗಳ ಕಲೆಕ್ಷನ್​​…!
ಬಾಬಿ ಡಿಯೋಲ್​ ಬಳಿ ಲ್ಯಾಂಡ್​​ ರೋವರ್​​ ರೇಂಜ್​​​ ರೋವರ್​​​, ಪೋರ್ಷೆ ಕೇಯೆನ್​​ SUV, ಮರ್ಸೀಡಿಸ್​​​​ ಬೆಂಜ್​​ ಎಸ್​​ ಕ್ಲಾಸ್​​, ಲ್ಯಾಂಡ್​​ ರೋವರ್​​ ರೇಂಜ್​ ರೋವರ್​​ ಸ್ಪೋರ್ಟ್​​​, ಲ್ಯಾಂಡ್​​ ರೋವರ್​​ ಫ್ರೀಸ್ಪೋರ್ಟ್​​ ಕಾರ್​​ಗಳಿವೆ. ಈ ಕಾರ್​​ಗಳು ತಾವು ಲಾಂಗ್​ ಟ್ರಿಪ್​, ಶಾರ್ಟ್​​ ರೋಡ್​​ ಟ್ರಿಪ್​ ಮತ್ತು ಕುಟುಂಬಸ್ಥರೊಂದಿಗೆ ಕಾಲ ಕಳೆಯಲು ಬಳಸುತ್ತಾರೆ. ಜತೆಗೆ ಈ ಕಾರ್​​ನ ಅಷಟೂ ಕಲೆಕ್ಷನ್​​ಗೆ 8.5 ಕೋಟಿಯಷ್ಟು ಹಣವನ್ನ ವೆಚ್ಚಿಸಿದ್ದಾರೆ.

ರಿಯಲ್​ ಎಸ್ಟೇಟ್​​​ಗಾಗಿ 6 ಕೋಟಿ ಹೂಡಿಕೆ ಮಾಡಿದ್ದಾರೆ..!
ಬಾಬಿ ಡಿಯೋಲ್​​ ಮುಂಬೈನಲ್ಲಿ ವೈಲ್​ ಪಾರ್ಲೆ ಹೆಸರಿನ 6 ಕೋಟಿ ಮೌಲ್ವದ ಭವ್ಯ ಬಂಗಲೆಯನ್ನ ಹೊಂದಿದ್ದಾರೆ. ಜತೆಗೆ ಭಾರತದಾದ್ಯಂತ ಸಾಕಷ್ಟು ರಿಯಲ್​ ಎಸ್ಟೇಟ್​​ ಇನ್ವೆಸ್ಟ್​​​ಮೆಂಟ್​​ಗಳನ್ನ ಮಾಡಿದ್ದಾರೆ. ಅಷ್ಟೇ ಅಲ್ಲ ವಿಜಯತ ಫಿಲ್ಮ್​ ಹೆಸರಿನಲ್ಲಿ ತಮ್ಮದೇ ಪ್ರೊಡಕ್ಷನ್​​ ಹೌಸ್​​ ಸಹ ಇದೆ.

ಇನ್ಸ್​​ಟಾಗ್ರಾಂ ಮತ್ತು ಎಕ್ಸ್​​ ಖಾತೆಯಲ್ಲಿ ದೊಡ್ಡ ಮಟ್ಟಿನ ಫಾಲೋವರ್ಸ್​​..!
ಬಾಬಿ ಡಿಯೋಲ್​ ತಮ್ಮದೇ ಪ್ರಡಕ್ಷನ್​ ಹೌಸ್​​, ಭವ್ಯ ಬಂಗಲೆ, ಎಸ್ಟೇಸ್​​​ಗಳು ಮಾತ್ರವಲ್ಲದೆ ಇನ್ಸ್​​​ಟಾಗ್ರಾಂ ಮತ್ತು ಎಕ್ಸ್​​ ಕಾತೆಯಲ್ಲಿ ದೊಡ್ಡ ಮಟ್ಟಿನ ಫ್ಯಾನ್​ ಫಾಲೋವಿಮಗನ್ನ ಹೊಂದಿದ್ದಾರೆ. 'ಬಾಬಿ'ಗೆ ಇನ್ಸ್​ಟಾಗ್ರಾಂನಲ್ಲಿ 2.8 ಮಿಲಿಯನ್​ ಫಾಲೋವರ್ಸ್​​​ ಇದ್ರೆ, ಎಕ್ಸ್​​ ಖಾತೆಯಲ್ಲಿ 450 ಸಾವಿರ ಫಾಲೋವರ್ಸ್​​​ಗಳಿದ್ದಾರೆ. ​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net