ಕಾರಿನ ಮೇಲೆ ಬಿದ್ದ ಕಂಟೇನರ್​! ನಾಲ್ವರು​ ಅಪ್ಪಚ್ಚಿ

accident
Published on

ಜೈಪುರ: ರಾಜಸ್ಥಾನದಲ್ಲಿ ಶನಿವಾರ ಬೆಳಗ್ಗೆ ಭೀಕರ ಅಪಘಾತ ಸಂಭವಿಸಿದ್ದು, ನಾಲ್ವರು ದುರ್ಮರಣಕ್ಕೀಡಾಗಿದ್ದಾರೆ. ಮಾರ್ಬೆಲ್​ಗಳನ್ನು ತುಂಬಿಕೊಂಡಿದ್ದ ಕಂಟೇನರ್​ ಒಂದು ಕಾರಿನ ಮೇಲೆ ಬಿದ್ದಿರುವುದರಿಂದಾಗಿ ಕಾರು ಅಪ್ಪಚ್ಚಿಯಾಗಿರುವುದಾಗಿ ವರದಿಯಾಗಿದೆ.

ಜೋಧ್​ಪುರ ನಿವಾಸಿಗಳಾಗಿದ್ದ ಮನೋಜ್​ ಶರ್ಮಾ, ಅಶ್ವಿನ್​ ಕುಮಾರ್​ ಡೇವ್​ ಹಾಗೂ ಅವರ ಪತ್ನಿ ರಶ್ಮಿ ದೇವಿ ಮತ್ತು ಬುಧರಂ ಪ್ರಜಾಪತ್​ ಅಹಮದಾಬಾದ್​ಗೆ ಮೀಟಿಂಗ್​ ಒಂದರ ಪ್ರಯುಕ್ತ ಹೋಗುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ 62ರಲ್ಲಿ ಹೋಗುವಾಗ ಕಂಟೇನರ್​ ಹೊತ್ತಿದ್ದ ಗಾಡಿಯ ಚಾಲಕ, ಕಾರನ್ನು ಓವರ್​ಟೇಕ್​ ಮಾಡಲು ಪ್ರಯತ್ನಿಸಿದ್ದಾನೆ. ತಿರುವಿನಲ್ಲಿ ಓವರ್​ಟೇಕ್​ ಮಾಡಲು ಪ್ರಯತ್ನಿಸಿದ ಪರಿಣಾಮ ಗಾಡಿಯ ನಿಯಂತ್ರಣ ತಪ್ಪಿದ್ದು, ಕಂಟೇನರ್​ ಕಾರಿನ ಮೇಲೆ ಬಿದ್ದಿದೆ. ಕಾರಿನಲ್ಲಿದ್ದ ನಾಲ್ವರು ಅಲ್ಲಿಯೇ ದುರ್ಮರಣಕ್ಕೀಡಾಗಿದ್ದಾರೆ.

ಅಪಘಾತ ನಡೆದ ತಕ್ಷಣ ಸ್ಥಳಕ್ಕೆ ಗ್ರಾಮಸ್ಥರು ಬಂದು ಸೇರಿದ್ದಾರೆ. ಪೊಲೀಸರಿಗೆ ವಿಚಾರ ಮುಟ್ಟಿಸಲಾಗಿದೆ. ಸ್ಥಳಕ್ಕೆ ಬಂದ ಪೊಲೀಸರು, ಮೃತ ದೇಹಗಳನ್ನು ಕಾರಿನಿಂದ ಹೊರತೆಗೆದು, ಶವಾಗಾರಕ್ಕೆ ಕಳುಹಿಸಿಕೊಟ್ಟಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net