ಪ.ಪಂ. ಮುಖ್ಯಾಧಿಕಾರಿ ಅಧಿಕಾರ ಸ್ವೀಕಾರ

Published on

ಸರಗೂರು: ಪಟ್ಟಣ ಪಂಚಾಯಿತಿ ನೂತನ ಮುಖ್ಯಾಧಿಕಾರಿಯಾಗಿ ಎಸ್.ಕೆ. ಸಂತೋಷ ಕುಮಾರ್ ಸೋಮವಾರ ಅಧಿಕಾರ ಸ್ವೀಕರಿಸಿದರು.

ಈ ಹಿಂದೆ ಎಚ್.ಡಿ.ಕೋಟೆ ಪುರಸಭೆ ಮತ್ತು ಸರಗೂರು ಪಟ್ಟಣ ಪಂಚಾಯಿತಿಯಲ್ಲಿ ಆರೋಗ್ಯಾಧಿಕಾರಿಯಾಗಿ ಎಸ್.ಕೆ.ಸಂತೋಷ ಕುಮಾರ್ ಕಾರ್ಯ ನಿರ್ವಹಿಸುತ್ತಿದ್ದರು. ಇದೀಗ ಮುಖ್ಯಾಧಿಕಾರಿಯಾಗಿ ಮುಂಬಡ್ತಿ ಪಡೆದ ನಂತರ ಸರಗೂರು ಪಟ್ಟಣ ಪಂಚಾಯಿತಿಗೆ ನಿಯೋಜನೆಗೊಂಡಿದ್ದು, ಈ ಹಿಂದಿನ ಮುಖ್ಯಾಧಿಕಾರಿ ಎಸ್.ಎಸ್.ಮಂಜುನಾಥ್ ಅಧಿಕಾರ ಹಸ್ತಾಂತರಿಸಿದರು.

ಸಂತೋಷ್ ಕುಮಾರ್
ಸಂತೋಷ್ ಕುಮಾರ್

ಎಸ್.ಎಸ್. ಮಂಜುನಾಥ್ ಮಾತನಾಡಿ, ತಮ್ಮ ಅಧಿಕಾರದ ಅವಧಿಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರು, ಸಿಬ್ಬಂದಿ ಹಾಗೂ ಸಾರ್ವಜನಿಕರ ಸಹಕಾರ ಸ್ಮರಣೀಯ. ಸರ್ಕಾರದಿಂದ ಬಿಡುಗಡೆಯಾದ ಅನುದಾನಗಳನ್ನು ಸದ್ಬಳಕೆ ಮಾಡಲಾಗಿದೆ ಎಂದು ತಿಳಿಸಿದರು.

ಎಸ್.ಕೆ.ಸಂತೋಷ ಕುಮಾರ್ ಮಾತನಾಡಿ, ಹಿಂದೆ ಕೋಟೆ ಮತ್ತು ಸರಗೂರು ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಇದ್ದು ನನ್ನ ಅಧಿಕಾರದ ಅವಧಿಯಲ್ಲಿ ಸರ್ವ ಸದಸ್ಯರು ಹಾಗೂ ಸಾರ್ವಜನಿಕರು ಹಾಗೂ ಅಧಿಕಾರಿ ವರ್ಗವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಣವನ್ನು ಮಾದರಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಶಕ್ತಿ ಮೀರಿ ಶ್ರಮಿಸುವುದಾಗಿ ಭರವಸೆ ನೀಡಿದರು.

ಪ.ಪಂ. ಅಧ್ಯಕ್ಷೆ ರಾಧಿಕಾ ಶ್ರೀನಾಥ್, ಉಪಾಧ್ಯಕ್ಷ ಶಿವಕುಮಾರ್, ಸದಸ್ಯರಾದ ಶ್ರೀನಿವಾಸ, ವಿನಾಯಕ ಪ್ರಸಾದ್, ಉಮಾರಾಮಚಂದ್ರ, ಚಲುವಕೃಷ್ಣ, ನೂರಳಾಸ್ವಾಮಿ, ಹೇಮಾವತಿ ರಮೇಶ್, ಎಸ್.ಉಮಾಶಂಕರ್, ಸಿಬ್ಬಂದಿ ಪಳಿನಿ ಸ್ವಾಮಿ, ರಾಮು, ಅರುಣ್ ಆರಾಧ್ಯ, ಶಿವಪ್ರಸಾದ್, ಅರ್ಜುನ್, ಅನಿತಾ ಕುಮಾರಿ, ಪೌರಕಾರ್ಮಿಕರು ಸೇರಿದಂತೆ ಮುಖಂಡರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net