

ಬೆಂಗಳೂರು: ಹಿಂದುಳಿದ ಸಮುದಾಯದಲ್ಲಿರುವ ಅವಕಾಶ ವಂಚಿತರಿಗೆ ಸವಲತ್ತು ಕಲ್ಪಿಸಿಕೊಡಲು ಹಿಂದುಳಿದ ವರ್ಗಗಳ ಆಯೋಗದ ವರದಿ ಅಂಗೀಕರಿಸಿ ಎಂದು ಕರ್ನಾಟಕ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ. ಸಿ.ಎಸ್.ದ್ವಾರಕಾನಾಥ್ ಹೇಳಿದರು.
ಒಬಿಸಿ ಫೆಡರೇಶನ್ ಆಫ್ ಇಂಡಿಯಾ ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಸೋಮವಾರ ಆಯೋಜಸಿದ್ದ ದಣ ಭಾರತ ಹಿಂದುಳಿದ ವರ್ಗಗಳ ಮುಖಂಡರ ಸಮಾವೇಶ, ಬಿ.ಪಿ.ಮಂಡಲ್ ವರದಿ, ಡಿ. ದೇವರಾಜ ಅರಸು ಸ್ಮರಣೋತ್ಸವ, ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಆಯೋಗದ ವರದಿ ಪ್ರಕಟಿಸುವುದರಿಂದ ಸಣ್ಣ ಸಮುದಾಯಗಳ ವಿವರ ತಿಳಿಯುತ್ತದೆ. ಪ್ರಾತಿನಿಧ್ಯ ಸಿಗದಿರುವುದರಿಂದ ಸಮಾಜದಲ್ಲಿ ವಿವಿಧ ಸಮುದಾಯಗಳು ಹಿಂದುಳಿಯಬೇಕಾಗಿ ಬಂತು. ಹಿಂದುಳಿದ ವರ್ಗಕ್ಕೆ ಸೇರಿದವರಲ್ಲಿ ಹೆಚ್ಚಿನವರು ಕುಶಲಕರ್ಮಿಗಳು. ಎಲ್ಲರಿಗೂ ತಲೆಯಲ್ಲಿ ಮೆದುಳು ಇದ್ದರೆ, ಕುಶಲಕರ್ಮಿಗಳಿಗೆ ಬೆರಳುಗಳಲ್ಲಿ ಮೆದುಳು ಇದೆ. ಈ ಸಮುದಾಯಗಳು ಇಲ್ಲದಿದ್ದರೆ, ಸಮಾಜದಲ್ಲಿ ಬದುಕಲು ಸಾಧ್ಯವೇ ಆಗುತ್ತಿರಲಿಲ್ಲ. ಐಎಎಸ್ ಸೇವೆಯಲ್ಲಿ ಮೇಲ್ಜಾತಿಗೆ ಸೇರಿದ ಶೇ.90 ಅಧಿಕಾರಿಗಳಿದ್ದಾರೆ. ಅವರಿಗೆ ಹಿಂದುಳಿದ ಜನರ ಸಮಸ್ಯೆಗಳು ಅರ್ಥವಾಗುವುದಿಲ್ಲ ಎಂದರು.
ಕೇಂದ್ರ ಸರ್ಕಾರ ಕೇವಲ ಶೇ.3ರಷ್ಟಿರುವ ಜನರಿಗೆ ಇಡಬ್ಲುಎಸ್ ಮೂಲಕ ಶೇ.10 ಮೀಸಲಾತಿ ನೀಡುತ್ತಿದೆ. ಇದು ಯಾವ ಸಾಮಾಜಿಕ ನ್ಯಾಯ? ಮಂಡಲ್ ಕಮಿಷನ್ ಮೂಲಕ ಶೇ.27 ಮೀಸಲಾತಿ ಸಿಗಬೇಕಾಗಿತ್ತು. ಈ ಮೂಲಕ ಹಿಂದುಳಿದ ವರ್ಗಗಳ ಪ್ರಾತಿನಿಧ್ಯಕ್ಕೆ ಧಕ್ಕೆಯಾಗುತ್ತಿದೆ. ಇದನ್ನು ಅರ್ಥ ಮಾಡಿಕೊಳ್ಳದಿದ್ದರೆ ಮುಂದಿನ ತಲೆಮಾರಿಗೆ ತೊಂದರೆಯಾಗುತ್ತದೆ. ಸರಿಯಾದ ಅಂಕಿ&ಅಂಶ ಇಲ್ಲದಿರುವುದರಿಂದ ಸರ್ಕಾರದಿಂದ ಸಿಗುವ ಸವಲತ್ತು ಹಿಂದುಳಿದ ವರ್ಗದ ಎಲ್ಲರಿಗೂ ಸಿಗುತ್ತಿಲ್ಲ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಬಿಬಿಎಂಪಿ ಮಾಜಿ ಮೇಯರ್ ವೆಂಕಟೇಶ್ಮೂರ್ತಿ, ಮಾಜಿ ಉಪಮೇಯರ್ ಎಸ್.ಹರೀಶ್, ಮಾಜಿ ಸಂಸದ ಕಮಲ್ ಕಿಶೋರ್ ಕಮಾಂಡೋ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯ ಎನ್.ಎಂ.ಸುರೇಶ್, ಶಿಣ ತ ಉಮೇಶ್ ಬಾಬು, ಸಮರ್ಥನಂ ಟ್ರಸ್ಟಿ ಜಿ.ಕೆ. ಮಹಾಂತೇಶ್, ಉದ್ಯಮಿ ಬಂಜಾರಪಾಳ್ಯ ಮಂಜುನಾಥ್, ಬಿ.ಪಿ.ಮಂಡಲ್ ಅವರ ಮೊಮ್ಮಗ ಸೂರಜ್ ಯಾದವ್ ಮಂಡಲ್, ಮುಖಂಡರಾದ ಕೇಶವ ಪ್ರಸಾದ್, ಸುಜಾತಾ ಮಯೂರಿ ಇತರರಿದ್ದರು.
ಬಜೆಟ್ನಲ್ಲಿ ಶೇ.50 ಅನುದಾನವನ್ನು ಶೇ.56 ಜನಸಂಖ್ಯೆಯಿರುವ ಹಿಂದುಳಿದ ವರ್ಗಗಳಿಗೆ ಮೀಸಲಿಡಬೇಕು. ಕಾಂತರಾಜು ವರದಿಯನ್ನು ಯಥಾವತ್ತಾಗಿ ಜಾರಿ ಮಾಡಬೇಕು. ಹಿಂದುಳಿದವರಿಗೆ ಇರುವ ಮೀಸಲಾತಿಯನ್ನು ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಶೈಣಿಕ, ಆರ್ಥಿಕ, ರಾಜಕೀಯವಾಗಿ ಜಾರಿಗೊಳಿಸಬೇಕು. ದೇಶದ ಸಂಪನ್ಮೂಲವನ್ನು ಜನಸಂಖ್ಯೆಗೆ ಅನುಗುಣವಾಗಿ ಕೇಂದ್ರ ಸರ್ಕಾರ ಸಮಾನವಾಗಿ ಹಂಚಬೇಕು ಎಂದು ಒಬಿಸಿ ಫೆಡರೇಶನ್ ಆಫ್ ಇಂಡಿಯಾ ಅಧ್ಯ ಜೆ.ಎಂಜೇರಪ್ಪ ಆಗ್ರಹಿಸಿದರು.
ಜಾತಿ ಸಮೀಕ್ಷೆ ಹಿಂದುಳಿದ ವರ್ಗಕ್ಕೆ ಸೀಮಿತವಾಗಿ ನಡೆದಿಲ್ಲ. ಎಲ್ಲ ಜಾತಿ ಸಮುದಾಯಗಳ ಸಮೀಕ್ಷೆ ಮಾಡಲಾಗಿದೆ. ಒಕ್ಕಲಿಗ, ಲಿಂಗಾಯತ, ಬ್ರಾಹ್ಮಣ ಸಮುದಾಯದಲ್ಲಿ ಇರುವ ಬಡವರ ಮಾಹಿತಿಯೂ ಅದರಲ್ಲಿದೆ.
-ಡಾ.ಸಿ.ಎಸ್.ದ್ವಾರಕಾನಾಥ್, ಮಾಜಿ ಅಧ್ಯಕ್ಷ, ಶಾಶ್ವತ ಹಿಂದುಳಿದ ವರ್ಗಗಳ ಆಯೋಗ