ಸೋಲನ್ನು ಒಪ್ಪಿಕೊಂಡರೆ ಮಾತ್ರ ಹೊರಬರಲು ಸಾಧ್ಯ; ಸಿಎಂ Devendra Fadnavis ಹೀಗಿಳಿದ್ದೇಕೆ?

Untitled design - 2024-12-08T145403.199
Published on

ಮುಂಬೈ: ಇವಿಎಂ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದಲ್ಲಿ ಬಿರುಸಿನ ಕದನ ನಡೆಯುತ್ತಿದೆ. ವಿರೋಧ ಪಕ್ಷದ ನಾಯಕರು ಈ ಬಗ್ಗೆ ನಿರಂತರವಾಗಿ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಕೂಟದ ಗೆಲುವಿನ ಕುರಿತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಅವರ ಹೇಳಿಕೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್(Devendra Fadnavis) ಭಾನುವಾರ(ಡಿಸೆಂಬರ್​ 8) ಪ್ರತಿಕ್ರಿಯಿಸಿದ್ದಾರೆ.

ಪವಾರ್ ಜೀ, ನೀವು ದೇಶದ ಹಿರಿಯ ನಾಯಕರು. 2024ರ ಲೋಕಸಭೆ ಚುನಾವಣೆಯ ಅಂಕಿಅಂಶಗಳ ಆಧಾರದ ಮೇಲೆ ಬಿಜೆಪಿ 1,49,13,914 ಮತಗಳು ಮತ್ತು 9 ಸ್ಥಾನಗಳನ್ನು ಪಡೆದಿದೆ, ಆದರೆ ಕಾಂಗ್ರೆಸ್ 96,41,856 ಮತಗಳನ್ನು ಮತ್ತು 13 ಸ್ಥಾನಗಳನ್ನು ಪಡೆದುಕೊಂಡಿದೆ. ಶಿವಸೇನೆ 73,77,674 ಮತಗಳು ಮತ್ತು 7 ಸ್ಥಾನಗಳನ್ನು ಪಡೆದರೆ, ಎನ್‌ಸಿಪಿ-ಶರದ್ ಪವಾರ್ ಗುಂಪು 58,51,166 ಮತಗಳು ಮತ್ತು 8 ಸ್ಥಾನಗಳನ್ನು ಪಡೆದರು.

2019ರ ಲೋಕಸಭೆಯ ಉದಾಹರಣೆ ಬಹಳ ಸ್ಪಷ್ಟವಾಗಿದೆ. ಕಾಂಗ್ರೆಸ್ 87,92,237 ಮತಗಳನ್ನು ಪಡೆದು 1 ಸ್ಥಾನ ಪಡೆದರೆ, ಆಗಿನ ಎನ್‌ಸಿಪಿ 83,87,363 ಮತಗಳನ್ನು ಪಡೆದು 4 ಸ್ಥಾನಗಳನ್ನು ಪಡೆದಿತ್ತು. ನೀವು ಸೋಲನ್ನು ಒಪ್ಪಿಕೊಂಡರೆ ನೀವು ಇದರಿಂದ ಬೇಗ ಹೊರಬರುತ್ತೀರಿ! ಆತ್ಮಾವಲೋಕನ ಮಾಡಿಕೊಳ್ಳಲು ನೀವು ಕನಿಷ್ಟ ನಿಮ್ಮ ಸಹೋದ್ಯೋಗಿಗಳಿಗೆ ಸಲಹೆ ನೀಡುತ್ತೀರಿ ಎಂದು ಭಾವಿಸುತ್ತೇವೆ ಎಂದು ಫಡ್ನವೀಸ್​​​ ಹೇಳಿದ್ದಾರೆ.

ಶರದ್​​​ ಪವಾರ್ ಅವರು, ಪಡೆದ ಮತಗಳು ಮತ್ತು ಪಕ್ಷಗಳು ಗೆದ್ದ ಸ್ಥಾನಗಳ ನಡುವಿನ ಹೋಲಿಕೆಯನ್ನು 'ಆಶ್ಚರ್ಯಕರ' ಎಂದು ಹೇಳಿದ್ದರು. ಅವರ ಪ್ರಕಾರ, ಎನ್‌ಸಿಪಿ (ಅಜಿತ್ ಪವಾರ್ ಬಣ) ಮತ್ತು ಶಿವಸೇನೆ (ಏಕನಾಥ್ ಶಿಂಧೆ ಬಣ) ಗಿಂತ ಹೆಚ್ಚು ಮತಗಳನ್ನು ಪಡೆದಿದ್ದರೂ ಅವರ ಪಕ್ಷ ಮತ್ತು ಮಿತ್ರ ಕಾಂಗ್ರೆಸ್ ಕಡಿಮೆ ಸ್ಥಾನಗಳನ್ನು ಗಳಿಸಿತು.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಕೂಟವು 288 ಸ್ಥಾನಗಳಲ್ಲಿ 230 ಸ್ಥಾನಗಳಲ್ಲಿ ಭರ್ಜರಿ ಜಯ ಸಾಧಿಸಿದೆ. ಆದರೆ ಮಹಾವಿಕಾಸ್ ಅಘಾಡಿ ಕೇವಲ 46 ಸ್ಥಾನಗಳನ್ನು ಗೆದ್ದಿದ್ದಾರೆ. ಡಿಸೆಂಬರ್ 5 ರಂದು ಮಹಾಮೈತ್ರಿಕೂಟ ಸರ್ಕಾರ ರಚನೆಯಾದ ನಂತರ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿದ್ದರೆ, ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಉಪ ಮುಖ್ಯಮಂತ್ರಿಗಳ ಜವಾಬ್ದಾರಿಯನ್ನು ಪಡೆದರು.(ಏಜೆನ್ಸೀಸ್​​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net