ವಿದ್ಯಾಸಂಸ್ಥೆ-ಉದ್ಯಮ ಸಹಯೋಗ ಕಲಿಕೆಗೆ ಪೂರಕ

jnnc
ಶಿವಮೊಗ್ಗದ ಜೆಎನ್‌ಎನ್‌ಸಿಇ ಹಾಗೂ ಎಲ್ ಆ್ಯಂಡ್ ಟಿ ಕಂಪನಿ ನಡುವೆ ಒಡಂಬಡಿಕೆ ಮಾಡಿಕೊಳ್ಳಲಾಯಿತು. ಜಿ.ಎಸ್.ನಾರಾಯಣ ರಾವ್, ಎಂ.ಎಫ್.ಫೆಬಿನಾ, ಡಾ. ಎಸ್.ವಿ.ಸತ್ಯನಾರಾಯಣ, ಡಾ. ವೈ.ವಿಜಯಕುಮಾರ್, ಡಾ. ಪಿ.ಮಂಜುನಾಥ್, ಡಾ. ಎಚ್.ಬಿ.ಸುರೇಶ್ ಇದ್ದರು.
Published on

ಶಿವಮೊಗ್ಗ: ವಿದ್ಯಾಸಂಸ್ಥೆ ಮತ್ತು ಉದ್ಯಮದ ನಡುವಿನ ಸಹಯೋಗ ವಿದ್ಯಾರ್ಥಿಗಳ ಪರಿಪೂರ್ಣ ಕಲಿಕೆಗೆ ಅನುಕೂಲವಾಗಲಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಅಭಿಪ್ರಾಯಪಟ್ಟರು.

ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೋಮವಾರ ಎಲ್ ಆ್ಯಂಡ್ ಟಿ ಕಂಪನಿ ಜತೆ ಒಡಂಬಡಿಕೆಗೆ ಸಹಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶೈಕ್ಷಣಿಕ ಮತ್ತು ಉದ್ಯಮದ ನಡುವಿನ ಅಂತರವನ್ನು ಕಡಿಮೆ ಮಾಡಿ ಪರಿಪೂರ್ಣ ಕಲಿಕೆಯೊಂದಿಗೆ ಪದವೀಧರರಾಗಿ ಸಮಾಜಕ್ಕೆ ತೆರೆದುಕೊಳ್ಳಲು ಇಂತಹ ಒಪ್ಪಂದಗಳು ಅವಶ್ಯ. ಇದು ಸ್ಪರ್ಧಾತ್ಮಕ ಉದ್ಯೋಗ ಮಾರುಕಟ್ಟೆಗೆ ವಿದ್ಯಾರ್ಥಿಗಳನ್ನು ಸಬಲಗೊಳಿಸುತ್ತದೆ ಎಂದರು.
ಎಲ್ ಆ್ಯಂಡ್ ಟಿ ಸಂಸ್ಥೆ ನಮ್ಮ ಕಾಲೇಜಿನ ಜತೆಗೆ ಒಡಂಬಡಿಕೆ ಮಾಡಿರುವುದು ಮತ್ತು ಇ-ಮೊಬಿಲಿಟಿ ಎಲೆಕ್ಟ್ರಿಕ್ ವಾಹನಗಳ ಸೆಂಟರ್ ಆಫ್ ಎಕ್ಸಲೆನ್ಸ್ ಕೇಂದ್ರ ಸ್ಥಾಪನೆ ಮಾಡಲು ಉದ್ದೇಶಿಸಿರುವುದು ಸಂತೋಷದ ಸಂಗತಿ. ಸಿವಿಲ್ ಮತ್ತು ಮೆಕಾನಿಕಲ್ ವಿಷಯಗಳು ಇಂಜಿನಿಯರಿಂಗ್ ಕ್ಷೇತ್ರದ ಮೂಲ. ಹೊಸತನದ ಚಿಂತನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಮತ್ತೊಮ್ಮೆ ಬೇಡಿಕೆಯ ವಿಭಾಗವಾಗಿ ಮುನ್ನೆಲೆಗೆ ಬಂದಿವೆ ಎಂದು ತಿಳಿಸಿದರು.
ಉದ್ಯಮಗಳೊಂದಿಗಿನ ಸಂಬಂಧ ವಿದ್ಯಾಸಂಸ್ಥೆಗಳಲ್ಲಿ ಪ್ರೌಢಿಮೆಯ ವಾತಾವರಣ ನಿರ್ಮಿಸುತ್ತದೆ. ಅಂತಹ ಪೂರಕ ವೇದಿಕೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಇಂದು ಎಲೆಕ್ಟ್ರಿಕ್ ವಾಹನಗಳು ಹಳ್ಳಿಗಳಲ್ಲೂ ಸಂಚರಿಸುತ್ತಿವೆ. ಮತ್ತಷ್ಟು ಸಂಶೋಧನೆಗಳೊಂದಿಗೆ ಪರಿಸರಕ್ಕೆ ಉತ್ತಮವಾಗುವ ಹೊಸ ಯೋಜನೆಗಳು ಅನುಷ್ಠಾನವಾಗಲಿ ಎಂದು ಆಶಿಸಿದರು.
ಪ್ರಾಚಾರ್ಯ ಡಾ. ವೈ.ವಿಜಯಕುಮಾರ್, ಎಲ್ ಆ್ಯಂಡ್ ಟಿ ಎಜುಟೆಕ್ ವಿಭಾಗದ ಪ್ರಾದೇಶಿಕ ವ್ಯವಸ್ಥಾಪಕ ಮಯಾಂಕ್ ರಂಜನ್, ಕಾಲೇಜಿನ ಶೈಕ್ಷಣಿಕ ಡೀನ್ ಡಾ. ಪಿ.ಮಂಜುನಾಥ, ಸಂಶೋಧನಾ ಡೀನ್ ಡಾ. ಎಸ್.ವಿ.ಸತ್ಯನಾರಾಯಣ, ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಇ.ಬಸವರಾಜ್, ರೊಬಾಟಿಕ್ಸ್ ವಿಭಾಗದ ಮುಖ್ಯಸ್ಥ ಡಾ. ಕೆ.ಎಂ.ಬಸಪ್ಪಾಜಿ, ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಎಚ್.ಬಿ.ಸುರೇಶ್, ಸಂಯೋಜಕ ಎಸ್.ಜೆ.ಅಮಿತ್‌ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net