ವಿದೇಶಗಳಲ್ಲಿ ಕರೊನಾ ಕನ್ನಡಿಗರ ವರದಿ: ಸಿಂಗಾಪುರದಲ್ಲಿ ಲಾಕ್​ಡೌನ್ ಇಲ್ಲ

Lockdown
Published on

ಈವರೆಗೆ 800 ಕರೊನಾ ಪ್ರಕರಣಗಳು ದಾಖಲಾಗಿದ್ದರೂ ಸಿಂಗಾಪುರ ಸರ್ಕಾರ ಇನ್ನೂ ಲಾಕ್​ಡೌನ್ (ದಿಗ್ಬಂಧನ) ಘೊಷಿಸಿಲ್ಲ. ಕರೊನಾದಿಂದ ಇಬ್ಬರು ವೃದ್ಧರು ಮೃತಪಟ್ಟಿದ್ದರೆ, ಸುಮಾರು 20 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ಉಲ್ಲಂಘಿಸಿದವರಿಗೆ ಸ್ಥಳದಲ್ಲೇ 3000 ಡಾಲರ್ ದಂಡ ಹಾಕಲಾಗುತ್ತಿದೆ ಎಂದು ಅಲ್ಲಿನ ಸೆಂಬ್ ಮೆರೈನ್ ಸಂಸ್ಥೆಯ ಶಿಪ್ ಯಾರ್ಡ್​ನಲ್ಲಿ ಉದ್ಯೋಗಿಯಾಗಿರುವ ಕನ್ನಡಿಗ ಗಣೇಶ್ ಪ್ರಸಾದ್ ಇನ್ನ ವಿಜಯವಾಣಿಗೆ ತಿಳಿಸಿದ್ದಾರೆ.

ಶಂಕಿತ ಕರೊನಾ ವ್ಯಕ್ತಿಗಳಿಗೆ ಮನೆಯಲ್ಲಿರಬೇಕು ಎಂದು ಸರ್ಕಾರ ಆದೇಶಿಸಿದೆ. ಉಲ್ಲಂಘಿಸಿದವರಿಗೆ 10000 ಡಾಲರ್ ದಂಡ ವಿಧಿಸಲಾಗುತ್ತಿದೆ. ಇಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾರತೀಯರಿದ್ದು, ಸದ್ಯಕ್ಕೆ ಯಾರಿಗೂ ಕರೊನಾ ಸಮಸ್ಯೆ ಬಂದಿಲ್ಲ. ಶಾಲೆಗಳಿಗೆ ಇನ್ನೂ ರಜೆ ಘೊಷಣೆಯಾಗದಿರುವುದರಿಂದ ಸಹಜವಾಗಿಯೇ ಹೆತ್ತವರು ಆತಂಕದಲ್ಲಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಸರ್ಕಾರವೇ ಸೋಷಿಯಲ್ ಡಿಸ್ಟೆನ್ಸ್ ಅಂಬಾಸಿಡರ್ಸ್ ಎಂದು ಒಂದಿಷ್ಟು ಸ್ವಯಂಸೇವಕರನ್ನು ಪ್ರತ್ಯೇಕವಾಗಿ ನೇಮಕ ಮಾಡಿದೆ. ಜನಸಂಪರ್ಕಕ್ಕೆ ಕಡಿವಾಣ ಹಾಕಿ, ಸಾಮಾಜಿಕ ಅಂತರ ನಿರ್ವಹಿಸುವುದೇ ಇವರ ಜವಾಬ್ದಾರಿ.

| ರಾಘವ ಶರ್ಮ ನಿಡ್ಲೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net