ಇಂದೂ 9 ಸಾವಿರದ ಗಡಿ ದಾಟಿದ ಕರೊನಾ ಸೋಂಕಿತರ ಸಂಖ್ಯೆ; 95 ಮಂದಿ ಸಾವು

covid-19-swab-sample-test 28 APR 20
Published on

ರಾಜ್ಯದಲ್ಲಿ ನಿನ್ನೆಯಂತೆ ಇಂದೂ ಕೂಡ ಬರೋಬ್ಬರಿ 9,319 ಹೊಸ ಕರೊನಾ ಪ್ರಕರಣಗಳು ಪತ್ತೆಯಾಗಿವೆ. ಆದರೆ ಸಮಾಧಾನ ಸಂಗತಿಯೆಂದರೆ 9,575 ಮಂದಿ ಚೇತರಿಸಿಕೊಂಡು ಡಿಸ್​​ಚಾರ್ಜ್​ ಆಗಿದ್ದಾರೆ. 95 ಸೋಂಕಿತರು ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ 3,98,551ಕ್ಕೆ ಏರಿಕೆಯಾಗಿದ್ದು, ಅದರಲ್ಲಿ ಸಕ್ರಿಯ ಪ್ರಕರಣಗಳು 99,266. ಹಾಗೇ ಇದುವರೆಗೆ ಕರೊನಾದಿಂದ ಗುಣಮುಖರಾದವರ ಸಂಖ್ಯೆ 2, 92,873 ಮತ್ತು ಮೃತಪಟ್ಟವರು 6393 ಸೋಂಕಿತರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net