ಮಹಾರಾಷ್ಟ್ರದಲ್ಲಿ 4000ಕ್ಕೂ ಅಧಿಕ ಪೊಲೀಸರಿಗೆ ಕರೊನಾ; ಪ್ರಾಣಬಿಟ್ಟವರು 59 ಸಿಬ್ಬಂದಿ

Corona Virusl
Published on

ಮುಂಬೈ: ಮಹಾರಾಷ್ಟ್ರದಲ್ಲಿ ಪೊಲೀಸರ ಪಾಲಿಗೆ ಕರೊನಾ ವೈರಸ್​ ಮಹಾಮಾರಿಯಂತೆ ಕಾಡುತ್ತಿದೆ. ಕರೊನಾ ನಿಯಂತ್ರಣದ ಕ್ರಮಗಳ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಪೊಲೀಸರು ದಿನೇದಿನೇ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿಗೆ ಒಳಗಾಗುತ್ತಿದ್ದಾರೆ.

ರಾಜ್ಯದಲ್ಲಿ ಒಟ್ಟು 1,69,883 ಮಂದಿ ಸೋಂಕಿತರು ಇದ್ದು, ಅದರಲ್ಲಿ ಸಕ್ರಿಯ ಪ್ರಕರಣಗಳು 73,313 ಸಕ್ರಿಯ ಪ್ರಕರಣಗಳಿವೆ. ಅದರಲ್ಲಿ 4861 ಮಂದಿ ಪೊಲೀಸರಾಗಿದ್ದಾರೆ ಎಂದು ಮಹಾ ಗೃಹ ಸಚಿವ ಅನಿಲ್​ ದೇಶ್​ಮುಖ್​ ತಿಳಿಸಿದ್ದಾರೆ.

ಕರೊನಾ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿರು ಪೊಲೀಸರು ಮಹಾರಾಷ್ಟ್ರದಲ್ಲಿ ತುಂಬ ಅಪಾಯದಲ್ಲಿದ್ದಾರೆ. ಇದುವರೆಗೆ ಒಟ್ಟು 59 ಪೊಲೀಸ್​ ಸಿಬ್ಬಂದಿ ಇದೇ ರೋಗದಿಂದ ಸಾವನ್ನಪ್ಪಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net