

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ (ಜೂ.7ರ ಸಂಜೆ 5ಗಂಟೆಯಿಂದ ಜೂ.8ರ ಸಂಜೆ 5ರವರೆಗೆ) ಒಟ್ಟು 308 ಹೊಸ ಕೊವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಒಟ್ಟು ಸಂಖ್ಯೆ 5760ಕ್ಕೆ ಏರಿದೆ. ಹಾಗೇ ಕಳೆದ 24ಗಂಟೆಯಲ್ಲಿ 387 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದು ಸಮಾಧಾನ ತಂದಿದೆ.
ರಾಜ್ಯದಲ್ಲಿ ಕೊವಿಡ್ನಿಂದ ಮೃತಪಟ್ಟವರ ಸಂಖ್ಯೆ 64ಕ್ಕೆ ಏರಿದ್ದು, ಒಟ್ಟು ಡಿಸ್ಚಾರ್ಜ್ ಆದವರು 64 ಮಂದಿ. ಸಕ್ರಿಯ ಕರೊನಾ ಪ್ರಕರಣಗಳು 3175. ಇಂದು ಪತ್ತೆಯಾದ 308 ಹೊಸ ಪ್ರಕರಣಗಳಲ್ಲಿ 277 ಮಂದಿ ಅಂತಾರಾಜ್ಯ ಪ್ರಯಾಣಿಕರು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇಂದಿನಿಂದ ರಾಜ್ಯ ಅನ್ಲಾಕ್ ಆಗಿದೆ. ಬಹುತೇಕ ದೇವಸ್ಥಾನ, ಮಾಲ್ಗಳೆಲ್ಲ ತೆರೆದಿವೆ. ಮತ್ತೊಂದು ಕಡೆ ಕೊವಿಡ್-19 ಸೋಂಕಿತರ ಸಂಖ್ಯೆಯೂ ಹೆಚ್ಚುತ್ತಲೇ ಇದೆ.
ಇಂದು ಕಲಬುರಗಿಯಲ್ಲಿ 99 ಪ್ರಕರಣಗಳು ಪತ್ತೆಯಾಗಿದ್ದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 700ರ ಗಡಿ ದಾಟಿದೆ. ಕಳೆದ 24 ಗಂಟೆಯಲ್ಲಿ ಯಾದಗಿರಿಯಲ್ಲಿ 66, ಬೀದರ್ನಲ್ಲಿ 48, ಉಡುಪಿ 45, ಬೆಂಗಳೂರು ನಗರ 18, ಬಳ್ಳಾರಿ 8, ಗದಗ 6, ಶಿವಮೊಗ್ಗ 4, ಧಾರವಾಡ 4, ಹಾಸನ 3, ದಕ್ಷಿಣ ಕನ್ನಡ 3, ಬಾಗಲಕೋಟೆ 2, ಕೊಪ್ಪಳ ಮತ್ತು ರಾಮನಗರದಲ್ಲಿ ತಲಾ ಒಂದು ಕೊವಿಡ್-19 ಕೇಸ್ಗಳು ಪತ್ತೆಯಾಗಿವೆ.