

ಬೆಂಗಳೂರು: ರಾಜ್ಯದಲ್ಲಿ ಕರೊನಾ ಓಟ ಮುಂದುವರಿದಿದೆ. ಕಳೆದ 24 ಗಂಟೆಯಲ್ಲಿ 1,105 ಹೊಸ ಕೊವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, 19 ಸೋಂಕಿತರು ಮೃತಪಟ್ಟಿದ್ದಾರೆ. 176 ಜನ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 14,295ಕ್ಕೆ ಏರಿದೆ. ಸಾವಿನ ಸಂಖ್ಯೆ 226 ಆಗಿದ್ದು, ಡಿಸ್ಚಾರ್ಜ್ ಆದವರ ಒಟ್ಟು ಸಂಖ್ಯೆ 7683. ಕರೊನಾ ಸಕ್ರಿಯ ಪ್ರಕರಣಗಳು 6382 ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇಂದೂ ಕೂಡ ಬೆಂಗಳೂರು ನಗರದಲ್ಲೇ ಹೆಚ್ಚು ಅಂದರೆ ಬರೋಬ್ಬರಿ 738ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಯಾವ ಜಿಲ್ಲೆಗಳಲ್ಲಿ
ಎಷ್ಟು ಸೋಂಕಿತರು ಎಂಬ ಪಟ್ಟಿ ಇಲ್ಲಿದೆ ನೋಡಿ..
ಬೆಂಗಳೂರು-738
ಬಳ್ಳಾರಿ-76
ದಕ್ಷಿಣ ಕನ್ನಡ-32
ಬೀದರ್-8
ಉತ್ತರ ಕನ್ನಡ-24
ಕಲಬುರ್ಗಿ-23
ಹಾಸನ ಮತ್ತು ವಿಜಯಪುರ-ತಲಾ 22
ತುಮಕೂರು ಮತ್ತು ಉಡುಪಿ-ತಲಾ 18
ಧಾರವಾಡ &ಚಿಕ್ಕಮಗಳೂರು-ತಲಾ 17
ಚಿಕ್ಕಬಳ್ಳಾಪುರ-15
ಯಾದಗಿರಿ-9
ಮಂಡ್ಯ-8
ಮೈಸೂರು-6
ಶಿವಮೊಗ್ಗ-5
ರಾಯಚೂರು, ಬಾಗಲಕೋಟೆ, ಗದಗ, ಕೋಲಾರ-ತಲಾ 4
ಬೆಂಗಳೂರು ಗ್ರಾಮಾಂತರ-3
ದಾವಣಗೆರೆ, ರಾಮನಗರ, ಚಿತ್ರದುರ್ಗ-ತಲಾ 2
ಹಾವೇರಿ, ಕೊಡಗು-ತಲಾ 1