ನಮ್ಮ ದೇಶದ ಬಗ್ಗೆ ಟೀಕೆ ಮಾಡುವ ಬದಲು ರಾಹುಲ್​ ಪಾಕಿಸ್ತಾನ ಪೌರತ್ವ ಪಡೆಯಲಿ: ಅಸ್ಸಾಂ CM

Bbau - 2025-11-05T172819.157
Published on

ಬಿಹಾರ: ರಾಹುಲ್​ ಗಾಂಧಿ ಭಾರತದಲ್ಲಿ ವಾಸ ಮಾಡುತ್ತಿದ್ದು, ದೇಶದ ಬಗ್ಗೆ ಕೆಟ್ಟದಾಗಿ ಮಾತಾಡುತ್ತಿದ್ದಾರೆ. ಭಾರತವನ್ನು ಟೀಕಿಸುವ ಬದಲು ಪಾಕಿಸ್ತಾನ ಪೌರತ್ವ ಪಡೆದು ಅಲ್ಲೇ ವಾಸ ಮಾಡಲಿ ಎಂದು ಅಸ್ಸಾಂ CM ಹಿಮಂತ ಬಿಸ್ವಾ ಶರ್ಮ ಸಲಹೆ ನೀಡಿದ್ದಾರೆ.

ಬಿಹಾರದ ರಾಮನಗರ ವಿಧಾನಸಭಾ ಕ್ಷೇತ್ರದ ತೌಲಾಹಾದಲ್ಲಿರುವ ಕ್ರೀಡಾ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಬುಧವಾರ ಮಾತನಾಡಿದರು. ದೇಶದಲ್ಲಿ ನುಸುಳುಕೋರರನ್ನು ಪ್ರೋತ್ಸಾಹಿಸುವ ಬದಲು ಅವರು ಪಾಕಿಸ್ತಾನಕ್ಕೆ ಹೋದ್ರೆ ಒಳಿತು ಎಂದು ಟೀಕಿಸಿದರು.

ಬಿಹಾರ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯುತ್ತಿರುವ ರಾಜ್ಯವಾಗಿದೆ. ನಿಮ್ಮ ಬೆಂಬಲದಿಂದ ಇದು ಅಭಿವೃದ್ಧಿ ಹೊಂದುತ್ತದೆ. ಇದು ಬಿಹಾರದ ಚಂಪಾರಣ್ ಪವಿತ್ರ ಭೂಮಿ, ಅತ್ಯಂತ ಗೌರವಾನ್ವಿತ ಪುರುಷ ಭಗವಾನ್ ಶ್ರೀರಾಮ, ಸೀತೆಯ ಮಗಳು ಜನಕನ ತಾಯಿ ಮತ್ತು ಸಹೋದರ ಲಕ್ಷ್ಮಣನ ಭೂಮಿ. ಇಲ್ಲಿ ಬೇರೆ ಯಾರಿಗೂ ಸ್ಥಾನವಿಲ್ಲ ಎಂದರು.

ಅಡ್ವಾಣಿಯನ್ನ ತಡೆದಿದ್ದು ಲಾಲು!

ಹಿರಿಯ ಬಿಜೆಪಿ ನಾಯಕ ಲಾಲ್ ಕೃಷ್ಣ ಅಡ್ವಾಣಿ ರಾಮ ಮಂದಿರ ನಿರ್ಮಾಣಕ್ಕಾಗಿ ಯಾತ್ರೆ ಕೈಗೊಂಡಾಗ, ಲಾಲು ಯಾದವ್ ಲಾಲ್​ ಅವರನ್ನು ಬಿಹಾರದಲ್ಲಿ ತಡೆದಿದ್ದರು. ಆದರೆ, ಈಗ ರಾಮಲಲ್ಲಾ ಅಯೋಧ್ಯೆಯಲ್ಲಿ ಕುಳಿತಿದ್ದಾರೆ ಎಂದು ಹೇಳಿದರು. ರಾಮಲಲ್ಲಾ ಮತ್ತೆ ಆಯೋಧ್ಯಗೆ ಮರುಳುತ್ತಾನೆ ಎಂದು ಆಗ ಜನರು ನಂಬಿರಲಿಲ್ಲ. ಆದರೆ ಈಗ ಕೊಟ್ಟ ಮಾತು ಬಿಜೆಪಿ ಉಳಿಸಿಕೊಂಡಿದೆ ಎಂದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net