ಮಧ್ಯಮ ವರ್ಗಕ್ಕೆ ಆದಾಯ ತೆರಿಗೆ ರದ್ದು ಪಡಿಸಿ: ಡಾ. ಸುಬ್ರಮಣಿಯನ್ ಸ್ವಾಮಿ

subramanyan swamy
Published on

ಬೆಂಗಳೂರು: ಆದಾಯ ತೆರಿಗೆಯನ್ನು ರದ್ದು ಪಡಿಸಬೇಕು. ಆದಾಯ ತೆರಿಗೆ ದೇಶದ ಮಧ್ಯಮ ಮತ್ತು ಸಂಬಳ ಆಧಾರಿತ ಕುಟುಂಬಗಳಿಗೆ ಹೊರೆಯಾಗುತ್ತಿದೆ. ದೇಶದ ಜಿಡಿಪಿಯಲ್ಲಿ ಶೇ. 22ರಷ್ಟು ಪಾಲು ಹೊಂದಿರುವ ಕೃಷಿಗೆ ಅದಾಯ ತೆರಿಗೆ ಅನ್ವಯಿಸುವುದಿಲ್ಲ. ಇನ್ನು ಬೇರೆ ಕೆಲವು ವರ್ಗಗಳಿಗೆ ಸಾಕಷ್ಟು ವಿನಾಯಿತಿಗಳನ್ನು ನೀಡಲಾಗಿದೆ. ಆದರೆ, ಬಡ ಸಂಬಳ ಪಡೆಯುವ ವರ್ಗ ಮಾತ್ರ ಆದಾಯ ತೆರಿಗೆ ಕಟ್ಟುತ್ತಿದೆ ಎಂದು ಬಿಜೆಪಿ ನಾಯಕ. ಅರ್ಥಶಾಸ್ತ್ರಜ್ಞ ಡಾ. ಸುಬ್ರಮಣಿಯನ್ ಸ್ವಾಮಿ ಹೇಳಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ವಿರಾಟ್ ಹಿಂದೂಸ್ತಾನ್ ಸಂಘಟನೆ ಆಯೋಜಿಸಿದ್ದ ಶ್ರೀ ಅಯ್ಯರ್ ಮತ್ತು ಜಗದೀಶ್ ಶೆಟ್ಟಿ ರಚಿತ ‘ಪೇಪರ್ ಇನ್ ಮನಿ ಔಟ್’ ಎಂಬ ಪುಸ್ತಕ ಬಿಡುಗಡೆಗೊಳಿಸಿದ ಬಳಿಕ ಅವರು ಮಾತನಾಡಿದರು.

ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ. 9ಕ್ಕೆ ಏರಿಸಬೇಕು. ದೇಶದಲ್ಲಿನ ತೆರಿಗೆ ಸಂಗ್ರಹದ ಶೇ. 75 ಲಕ್ಷುರಿ ವಸ್ತುಗಳ ತೆರಿಗೆಯಿಂದ ಸಂಗ್ರಹವಾಗುತ್ತದೆ. ಲಕ್ಷುರಿ ಉತ್ಪನ್ನಗಳ ವಹಿವಾಟು ಲಾಭದಾಯಕವಾಗಿರುವುದರಿಂದ ಇಂತಹ ಉತ್ಪನ್ನಗಳನ್ನು ನಿರ್ಮಿಸಲು ಕಂಪೆನಿಗಳು ಉತ್ಸಾಹ ತೋರುತ್ತವೆ. ಜೀವನ ಅಗತ್ಯ ಉತ್ಪನ್ನಗಳನ್ನು ತಯಾರಿಸುವ ಕಂಪೆನಿಗಳಿಗೆ ಒತ್ತು ನೀಡಬೇಕು. ಮಾರುಕಟ್ಟೆ ಆಧಾರಿತ ಆರ್ಥಿಕತೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಅವರು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net