ಕರ್ಕಳ್ಳಿಯ ನಾಗಬನದಲ್ಲಿ ಅಭಿಷೇಕ

ಸೋಮವಾರಪೇಟೆ ಸಮೀಪ ಕರ್ಕಳ್ಳಿ ಕಟ್ಟೆ ಬಸವೇಶ್ವರ ದೇವಾಲಯಗಳಲ್ಲಿ ಷಷ್ಠಿ ಹಬ್ಬ ಆಚರಿಸಲಾಯಿತು.
Published on

ಸೋಮವಾರಪೇಟೆ: ಪಟ್ಟಣದ ವಿವಿಧ ದೇವಾಲಯಗಳಲ್ಲಿ ಷಷ್ಠಿ ಹಬ್ಬದ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ಶನಿವಾರ ಆಚರಿಸಲಾಯಿತು. ಕರ್ಕಳ್ಳಿಯ ಕಟ್ಟೆ ಬಸವೇಶ್ವರ ದೇವಾಲಯ ಹಾಗೂ ದೇವಾಲಯದ ಸಮೀಪವಿರುವ ನಾಗಬನದಲ್ಲಿ ಅರ್ಚಕ ವಿರೂಪಾಕ್ಷ ಪೌರೋಹಿತ್ಯದಲ್ಲಿ ಅರ್ಚನೆಯೊಂದಿಗೆ ವಿಶೇಷ ಪೂಜೆ, ಮಹಾಮಂಗಳಾರತಿ ನೆರವೇರಿತು. ಭಕ್ತರು ನಾಗದೇವರಿಗೆ ಹಾಲು, ಎಳನೀರು, ಅರಶಿನ ಅಭಿಷೇಕ ಮಾಡಿ ಪೂಜೆ ಸಲ್ಲಿಸಿದರು. ಪಟ್ಟಣದ ಸೋಮೇಶ್ವರ ದೇವಾಲಯ, ಅಯ್ಯಪ್ಪಸ್ವಾಮಿ ದೇವಾಲಯ ಹಾಗೂ ಗ್ರಾಮೀಣ ಭಾಗದ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net