ಜೂನಿಯರ್ ಅಂಬರೀಷ್ ಬರೋ ಸಮಯ; ಆಗಸ್ಟ್ 15ರಂದು ಅಭಿಷೇಕ್ ಪತ್ನಿ ಅವಿವಾ ಸೀಮಂತ

abishek ambareesh
Published on

ಬೆಂಗಳೂರು:  ಅಭಿಷೇಕ್​​ , ಅವಿವಾ ದಂಪತಿ ಮೊದಲ ಮಗುವಿನ ನೀರಿಕ್ಷೆಯಲ್ಲಿದ್ದಾರೆ. ಅವಿವಾ ಸೀಮಂತ ಕಾರ್ಯ ತಯಾರಿಯನ್ನು ಕುಟುಂಬಸ್ಥರು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

ಅಭಿಷೇಕ್ ಅಂಬರೀಷ್ ಹಾಗೂ ಅವಿವಾ 2023ರ ಜೂನ್ 5ರಂದು ವಿವಾಹ ಆದರು. ಅಂಬರೀಷ್ ಮನೆಗೆ ಜೂನಿಯರ್ ಅಂಬರೀಷ್ ಬರೋ ಸಮಯ ಆಗಿದೆ. ಅರ್ಥಾತ್, ಅಭಿಷೇಕ್ ಅಂಬರೀಷ್ ಅವರು ಶೀಘ್ರವೇ ತಂದೆ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.  ಆಗಸ್ಟ್ 15ರಂದು ಸೀಮಂತ ಶಾಸ್ತ್ರ ನಡೆಯಲಿದೆಯಂತೆ.

ಆಗಸ್ಟ್ 15ರಂದು ಅಭಿಷೇಕ್ ಅಂಬರೀಷ್ ಮನೆಯಲ್ಲಿ ಸರಳವಾಗಿ ಶಾಸ್ತ್ರ ನಡೆಸಲು ಸಿದ್ಧತೆ ನಡೆದಿದೆ . ತುಂಬಾನೇ ಖಾಸಗಿಯಾಗಿ ಸೀಮಂತ ಶಾಸ್ತ್ರ ನಡೆಯಲಿದೆ. ಈಗ ಅವಿವಾಗೆ ಏಳು ತಿಂಗಳು ಎನ್ನಲಾಗಿದೆ. ಈ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಆಪ್ತರು ಹಾಗೂ ಕುಟುಂಬದವರು ಕೂಡ ಈ ಸೀಮಂತ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರಂತೆ. ಇದಕ್ಕಾಗಿ ಈಗಾಗಲೇ ಸಿದ್ಧತೆ ನಡೆದಿದೆ ಎಂದು ಹೇಳಲಾಗುತ್ತಿದೆ. ಅಕ್ಟೋಬರ್ ವೇಳೆಗೆ ಅವಿವಾ ಮಗುವಿಗೆ ಜನ್ಮ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ರೆಬಲ್‌ ಸ್ಟಾರ್‌ ಅಂಬರೀಶ್‌ ಮತ್ತು ಸಂಸದೆ ಸುಮಲತಾ ಪುತ್ರ, ನಟ ಅಭಿಷೇಕ್‌ ಹಾಗೂ ಫ್ಯಾಷನ್‌ ಉದ್ಯಮಿ ಅವಿವಾ ಬಿದ್ದಪ್ಪ ಮದುವೆ ಕಳೆದ ವರ್ಷ ಜೂನ್‌ 5ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಿತು. ಅಭಿಷೇಕ್ ಅಂಬರೀಷ್ ಅವರನ್ನು ವಿವಾಹವಾಗಿರುವ ಅವಿವಾ ಬಿದ್ದಪ್ಪ, ಮಾಡೆಲ್ ಹಾಗೂ ಫ್ಯಾಷನ್ ಡಿಸೈನರ್ ಆಗಿದ್ದಾರೆ. ಅವಿವಾ ತಂದೆ ಕೂಡ ದೊಡ್ಡ ಬ್ಯುಸಿನೆಸ್ ಮ್ಯಾನ್ ಆಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net