ಕೋರ್ಟ್​ ಮೆಟ್ಟಿಲೇರಿದ ಆರಾಧ್ಯ ಬಚ್ಚನ್​​; ಅಭಿಷೇಕ್​-ಐಶ್ವರ್ಯಾ​ ಪುತ್ರಿ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದೇಕೆ? | Aaradhya bachchan

dk (99)
Published on

ನವದೆಹಲಿ: ಬಾಲಿವುಡ್​ ನಟ ಅಭಿಷೇಕ್​ ಬಚ್ಚನ್​ - ನಟಿ ಐಶ್ವರ್ಯಾ ದಂಪತಿಯ ಪುತ್ರಿ ಆರಾಧ್ಯ(Aaradhya) ಬಚ್ಚನ್​ ಇದೀಗ ಮತ್ತೊಮ್ಮೆ ಕೋರ್ಟ್​ ಮೆಟ್ಟಿಲೆರಿದ್ದು, ತನ್ನ ಆರೋಗ್ಯದ ಬಗ್ಗೆ ಹರಿದಾಡುತ್ತಿರುವ ನಕಲಿ ವಿಡಿಯೋಗಳು ಮತ್ತು ತಪ್ಪು ದಾರಿಗೆ ಏಳೆಯುವಂತೆ ಮಾಡುವ ಮಾಹಿತಿಯನ್ನು ರದ್ದು ಪಡಿಸುವಂತೆ ದೆಹಲಿ ಹೈಕೋರ್ಟ್​ಗೆ ಅರ್ಜಿ ಸಲ್ಲಿದ್ದಾರೆ.

ನಟ ಅಮಿತಾಬ್​ ಬಚ್ಚನ್​ ಮೊಮ್ಮಗಳು ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ಇಂದು ವಿಚಾರಣೆ ನಡೆಸಿ ಗೂಗಲ್​ಗೆ ನೋಟಿಸ್​ ಜಾರಿ ಮಾಡಿದೆ. ಪ್ರತಿಯೊಬ್ಬ ವ್ಯಕ್ತಿಯು ಸೆಲೆಬ್ರಿಟಿಯಾಗಿದ್ದರೂ, ವಿಶೇಷವಾಗಿ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ವಿಷಯದಲ್ಲಿ ಘನತೆಯ ಹಕ್ಕಿದೆ ಎಂದು ನ್ಯಾಯಾಲಯ ಹೇಳಿದೆ.

ಕೆಲವು ವೆಬ್‌ಸೈಟ್‌ಗಳು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳು ಹೈಕೋರ್ಟ್ ಆದೇಶವನ್ನು ಪಾಲಿಸದ ಹಿನ್ನೆಲೆಯಲ್ಲಿ ಆರಾಧ್ಯ ಬಚ್ಚನ್ ಎರಡನೇ ಅರ್ಜಿಯನ್ನು ಸಲ್ಲಿಸಿದ್ದಾರೆ.

ತನ್ನ ಹಿಂದಿನ ಆರ್ಜಿಯಲ್ಲಿ ಆರಾಧ್ಯ ಗುರುತಿಸಿರುವ ವಿಷಯಗಳನ್ನು ತೆಗೆದು ಹಾಕುವಂತೆ ಗೂಗಲ್​ನ ಸರ್ಚ್​ ಎಂಜಿನ್​ ಮತ್ತು ಬಾಲಿವುಡ್​ ಟೈಮ್ಸ್​ ಮತ್ತು ಇತರೆ ವೈಬ್​ಸೈಟ್​ಗಳಿಗೆ ನಿರ್ದೇಶಿಸಿದ(ಏಪ್ರಿಲ್ 23,2023) ಹಿಂದಿನ ದೆಹಲಿ ಹೈಕೋರ್ಟ್​ ಆದೇಶನುಸಾರ ಮತ್ತೆ ಹೊಸ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net