

ನವದೆಹಲಿ: ಪಂಚರಾಜ್ಯಗಳ ಚುನಾವಣೋತ್ತರ ಸಮೀಕ್ಷೆಯಲ್ಲಿ ಪಂಚ ನದಿಗಳ ಪ್ರದೇಶವೆಂದೇ ಹೆಸರಾಗಿರುವ ಪಂಜಾಬ್ನಲ್ಲಿ ಕೇಜ್ರಿವಾಲ್ ಕಮಾಲ್ ಗೋಚರಿಸಲಾರಂಭಿಸಿದ್ದು, ಆಪ್ ಇಲ್ಲಿ ಮೇಲುಗೈ ಸಾಧಿಸುವ ಸಾಧ್ಯತೆಯೇ ಅಧಿಕವಾಗಿದೆ.
ನಾಲ್ಕು ಪ್ರಮುಖ ಏಜೆನ್ಸಿಗಳ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಪಂಜಾಬ್ ಫಲಿತಾಂಶ ಅರವಿಂದ್ ಕೇಜ್ರಿವಾಲ್ ಮುಖಾರವಿಂದದಲ್ಲಿ ನಗು ಅರಳಿಸುವ ಸಾಧ್ಯತೆಯೇ ಅಧಿಕವಾಗಿದೆ.
ಒಟ್ಟು 117 ವಿಧಾನಸಭಾ ಕ್ಷೇತ್ರಗಳ ಪಂಜಾಬ್ನಲ್ಲಿ ಆಮ್ ಆದ್ಮಿ ಪಕ್ಷವು ಇಂಡಿಯಾ ಟೈಮ್ಸ್ ಆ್ಯಕ್ಸಿಸ್ ಮೈ ಇಂಡಿಯಾ ಪ್ರಕಾರ 76ರಿಂದ 90, ಸಿ-ವೋಟರ್ ಪ್ರಕಾರ 51-61, ಟುಡೇಸ್ ಚಾಣಕ್ಯ ಪ್ರಕಾರ 100, ಟೈಮ್ಸ್ ನೌ ವೇಟೊ ಪ್ರಕಾರ 70 ಸ್ಥಾನಗಳೊಂದಿಗೆ ಸ್ಪಷ್ಟ ಬಹುಮತದ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಹೇಳಲಾಗಿದೆ.