

ನವದೆಹಲಿ: ಏಪ್ರಿಲ್ 26ರಂದು ದೆಹಲಿ ಮುನ್ಸಿಪಾಲ್ ಕೌನ್ಸಿಲ್(MCD)ನ ಮೇಯರ್, ಉಪಮೇಯರ್ ಸ್ಥಾನಕ್ಕೆ ನಡೆಯುವ ಚುನಾವಣೆಗೆ ಆಮ್ ಆದ್ಮಿ ಪಕ್ಷ ತನ್ನ ಹುರಿಯಾಳುಗಳನ್ನು ಘೋಷಿಸಿದೆ.
ಹಾಲಿ ಮೇಯರ್ ಶೆಲ್ಲಿ ಓಬೆರಾಯ್ ಹಾಗೂ ಉಪಮೇಯರ್ ಆಲೆ ಮೊಹಮ್ಮದ್ ಇಕ್ಬಾಲ್ ಅವರನ್ನು ಅಭ್ಯರ್ಥಿಗಳೆಂದು ಎಎಪಿ ನಾಯಕ ಸಂಜಯ್ ಸಿಂಗ್ ಘೋಷಿಸಿದ್ಧಾರೆ.
ಈ ಕುರಿತು ಮಾತನಾಡಿದ ಸಂಜಯ್ ಸಿಂಗ್ ನಾವು ಮೇಯರ್ ಹಾಗೂ ಉಪಮೇಯರ್ ಚುನಾವಣೆಗೆ ಶೆಲ್ಲಿ ಒಬೆರಾಯ್ ಹಾಗೂ ಆಲೆ ಮೊಹಮ್ಮದ್ ಇಕ್ಬಾಲ್ ಅವರನ್ನು ಆಯ್ಕೆ ಮಾಡಿದ್ದೇವೆ. ಕಳೆದ ಭಾರಿ ಚುನಾವಣೆ ಸಮಯದಲ್ಲಿ ಬಿಜೆಪಿಯ ಗದ್ದಲದ ನಡುವೆ ನಮ್ಮ ಅಭ್ಯರ್ಥಿಗಳು ಜಯ ಸಾಧಿಸಿದ್ದರು. ಈ ಭಾರಿಯೂ ಕೂಡ ನಮ್ಮ ಅಭ್ಯರ್ಥಿಗಳು ಕೂಡ ಜಯಗಳಿಸಲಿದ್ಧಾರೆ ಎಂದು ತಿಳಿಸಿದ್ಧಾರೆ.
ದೆಹಲಿ ಪಾಲಿಕೆಯ ಐದು ವರ್ಷಗಳ ಅವಧಿಯಲ್ಲಿ ಸರದಿ ಆಧಾರದ ಮೇಲೆ ಮೇಯರ್ ಉಪಮೇಯರ್ ಸ್ಥಾನಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಮೊದಲ ವರ್ಷ ಮಹಿಳೆಯರಿಗೆ, ಎರಡನೇ ವರ್ಷ ಓಪನ್ ಕೆಟಗರಿ, ಮೂರನೇ ವರ್ಷ ಮೀಸಲು ವರ್ಗಕ್ಕೆ, ನಾಲ್ಕು ಮತ್ತು ಐದನೇ ವರ್ಷ ಓಪನ್ ಕೆಟಗರಿಗೆ ಮೀಸಲಿಡಲಾಗಿದೆ.
ಡಿಸಂಬರ್ ನಾಲ್ಕರಂದು ನಡೆದ 250 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಎಎಪಿ ಪಕ್ಷವು ಪ್ರಚಂಡ ದಿಗ್ವಿಜಯ ಸಾಧಿಸಿತ್ತು.