ಕೋಟಿಗಟ್ಟಲೆ ಆಸ್ತಿಯಿದ್ದರೂ ಅಮೀರ್ ಮಗನ ಬಳಿ ಕಾರೇ ಇಲ್ಲ! ಬಸ್ಸು, ರೈಲಿನಲ್ಲಿ ಪ್ರಯಾಣಿಸುತ್ತಾರೆ...

aamir
Published on

ನವದೆಹಲಿ: ಸ್ಟಾರ್ ಮಕ್ಕಳು ಸಾಮಾನ್ಯವಾಗಿ ಐಷಾರಾಮಿ ಜೀವನಕ್ಕೆ ಹೆಸರುವಾಸಿಯಾಗಿದ್ದಾರೆ.  ಕಳೆದ ಕೆಲವು ವರ್ಷಗಳಲ್ಲಿ ಚಿತ್ರರಂಗಕ್ಕೆ ಅನೇಕ ಸ್ಟಾರ್ ಮಕ್ಕಳು ಪಾದಾರ್ಪಣೆ ಮಾಡಿದ್ದಾರೆ. ಮತ್ತೆ ಕೆಲವರು ಪಾದಾರ್ಪಣೆ ಮಾಡಲಿದ್ದಾರೆ. ಈ ಪಟ್ಟಿಯಲ್ಲಿ ಅಮೀರ್ ಖಾನ್ ಪುತ್ರ ಜುನೈದ್ ಖಾನ್ ಹೆಸರೂ ಇದೆ.

ಅಂದಹಾಗೆ ಅಮೀರ್ ಖಾನ್ ಅವರ ಮಗ ಜುನೈದ್, ತಂದೆ ಅವರಂತೆ ತೆರೆಯ ಮೇಲೆ ನಾಯಕನಾಗಿ ಕಾಣಿಸಿಕೊಳ್ಳುತ್ತಿಲ್ಲ. ನಿರ್ಮಾಪಕರಾಗಿ ಕಾಣಿಸಿಕೊಳ್ಳಲಿದ್ದಾರೆ. ‘ಪ್ರೀತಂ ಪ್ಯಾರೆ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಏತನ್ಮಧ್ಯೆ, ಅಭಿಮಾನಿಗಳು ನಂಬಲು ಸಾಧ್ಯವಾಗದಂತಹ ವಿಷಯವನ್ನು ಇದೀಗ ಅಮೀರ್ ಖಾನ್ ತಮ್ಮ ಮಗನ ಬಗ್ಗೆ ಬಹಿರಂಗಪಡಿಸಿದ್ದಾರೆ.

ಜುನೈದ್ ಬಳಿ ಯಾವುದೇ ಕಾರು ಇಲ್ಲ

ಅಮೀರ್ ಸಂದರ್ಶನವೊಂದರಲ್ಲಿ ತಮ್ಮ ಪುತ್ರನ ಬಳಿ ಯಾವುದೇ ಕಾರು ಇಲ್ಲ ಎಂದು ಹೇಳಿದ್ದಾರೆ. "ನನ್ನ ಮಗ ಜುನೈದ್ ಇನ್ನೂ ಸಾರ್ವಜನಿಕ ಸಾರಿಗೆಯಲ್ಲಿ ಓಡಾಡುತ್ತಾನೆ. ಅದನ್ನೇ ಇಷ್ಟಪಡುತ್ತಾನೆ'' ಎಂದು ತಿಳಿಸಿದ್ದಾರೆ. ಒಮ್ಮೆ ಜುನೈದ್, ಸ್ನೇಹಿತನ ಮದುವೆಗೆ ಬೆಂಗಳೂರಿಗೆ ಹೋದಾಗ ಅಲ್ಲಿಗೆ ವಿಮಾನದಲ್ಲಿ ಹೋಗುವ ಬದಲು ಬಸ್ಸಿನಲ್ಲಿ ಹೋಗಿದ್ದ. ಜುನೈದ್ ಸ್ವಲ್ಪ ವಿಭಿನ್ನವಾಗಿದ್ದು, ಲೈಫ್ ಸ್ಟೈಲ್​ ಬದಲಾಗಿಲ್ಲ. ಜುನೈದ್ ಬಳಿ ಕಾರೂ ಇಲ್ಲ. ಕಾರು ಖರೀದಿಸಲೂ ಬಿಡುವುದಿಲ್ಲ'' ಎಂದು ತಿಳಿಸಿದ್ದಾರೆ.

ಜುನೈದ್ ಖಾನ್ ನಾಯಕನಾಗಿ ಪಾದಾರ್ಪಣೆ ಮಾಡುವ ಬದಲು ನಿರ್ಮಾಪಕನಾಗಿ ಬಾಲಿವುಡ್ ಪ್ರವೇಶಿಸಲಿದ್ದಾರೆ. ಈ ಚಿತ್ರದ ಹೆಸರು 'ಪ್ರೀತಮ್ ಪ್ಯಾರೆ'. ಇದರಲ್ಲಿ ಅಮೀರ್ ಖಾನ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ನಟ 5 ನಿಮಿಷಗಳ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net