

Aamir Khan:ಬಾಲಿವುಡ್ ನಟ ಅಮೀರ್ ಖಾನ್ ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಪಟ್ಟ ವಿಷಯಗಳಿಗೆ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಅಂತದ್ದೇ ವಿಚಾರಕ್ಕೆ ಮತ್ತೆ ಸುದ್ದಿಯಾಗಿದ್ದಾರೆ.
ಹೌದು, ಅಮೀರ್ 2021ರಲ್ಲಿ ಗೌರಿ ಖಾನ್ ಜತೆ ಸಂಸಾರಿಕ ಜೀವನ ಮುರಿದುಕೊಂಡಿದ್ದಾರೆ. ಇದೀಗ ನಾಲ್ಕು ವರ್ಷಗಳ ಬಳಿಕ ಸಂಸಾರಿಕ ಜೀವನದ ಬಾಗಿಲು ಮತ್ತೆ ತೆರದಿದೆ. ಅದಕ್ಕೆ ಕಾರಣ ಬೆಂಗಳೂರಿನ ಯುವತಿನ ಜತೆ ಡೇಟಿಂಗ್ನಲ್ಲಿದ್ದಾರೆ ಎಂದು ಬಾಲಿವುಡ್ನಲ್ಲಿ ವದಂತಿ ಹಬ್ಬಿದೆ. ಹೀಗಾಗಿ, ಅಮೀರ್ ಮೂರನೇ ಮದುವೆಯಾಗಿ ರೆಡಿಯಾಗಿದ್ದಾರೆ ಎಂದು ವರದಿಯಾಗಿದೆ.
ಬೆಂಗಳೂರು ಮೂಲದ ಗೌರಿ ಎನ್ನುವ ಹೆಸರಿನ ಯುವತಿ ಜತೆ ಡೇಟಿಂಗ್ ಮಾಡುತ್ತಿದ್ದಾರೆ. ಯುವತಿ ಬಾಲಿವುಡ್ ಮತ್ತು ಸಿನಿಮಾ ಕ್ಷೇತ್ರಕ್ಕೆ ಯಾವುದೇ ಸಂಬಂಧವಿಲ್ಲ. ಆದರೆ, ನಟ ಶಾರುಖ್ಖಾನ್ ಪತ್ನಿ ಗೌರಿ ಖಾನ್ ಸಂಬಂಧಿಕರು ಎಂದು ವರದಿ ಉಲ್ಲೇಖಿಸಲಾಗಿದೆ.
ಅಮೀರ್ ಖಾನ್ ಅವರ ಪತ್ನಿಯರ ಬಗ್ಗೆ ವಿಚಾರಕ್ಕೆ ಬರುವುದಾದರೆ, ಅವರು 1986 ರಲ್ಲಿ ರೀನಾ ದತ್ತಾ ಅವರನ್ನು ವಿವಾಹವಾದರು. ರೀನಾ ಮತ್ತು ಆಮಿರ್ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇಬ್ಬರೂ 2002 ರಲ್ಲಿ ಬೇರ್ಪಟ್ಟರು. ಅದಾದ ನಂತರ ಆಮಿರ್ 2005 ರಲ್ಲಿ ಕಿರಣ್ ರಾವ್ ಅವರನ್ನು ವಿವಾಹವಾದರು. ಹಲವು ವರ್ಷಗಳ ದಾಂಪತ್ಯದ ನಂತರ ಕಿರಣ್ ಮತ್ತು ಆಮಿರ್ 2021 ರಲ್ಲಿ ಬೇರ್ಪಟ್ಟರು. ಆಮಿರ್ ಮತ್ತು ಕಿರಣ್ ದಂಪತಿಗೆ ಒಬ್ಬ ಮಗನೂ ಇದ್ದಾನೆ.(ಏಜೆನ್ಸೀಸ್)