ಪಹಣಿಗೆ ಆಧಾರ್ ಜೋಡಣೆ ಕಡ್ಡಾಯ

tahashildhar b.n.girish
ಶಿವಮೊಗ್ಗ ತಹಸೀಲ್ದಾರ್ ಬಿ.ಎನ್.ಗಿರೀಶ್
Published on

ಶಿವಮೊಗ್ಗ: ರೈತರು ತಮ್ಮ ಜಮೀನಿನ ಪಹಣಿ ಪತ್ರಕ್ಕೆ ಆಧಾರ್ ಸಂಖ್ಯೆ ಜೋಡಣೆ ಮಾಡುವುದು ಕಡ್ಡಾಯ. ರೈತರು ಸರ್ಕಾರದ ಯಾವುದೇ ಸೌಲಭ್ಯಗಳ ಫಲಾನುಭವಿಯಾಗಲು ರೈತರು ತಮ್ಮ ಆರ್‌ಟಿಸಿಗೆ ಆಧಾರ್ ಸಂಖ್ಯೆ ಜೋಡಿಸಬೇಕು ಎಂದು ಶಿವಮೊಗ್ಗ ತಹಸೀಲ್ದಾರ್ ಬಿ.ಎನ್.ಗಿರೀಶ್ ತಿಳಿಸಿದ್ದಾರೆ.

ಈ ಕುರಿತು ಸರ್ಕಾರ ಹೊಸ ತಂತ್ರಾಂಶ ಅಭಿವೃದ್ಧಿಪಡಿಸಿದ್ದು ಅದನ್ನು ರೈತರು ತಮ್ಮ ಮೊಬೈಲ್ ಮೂಲಕ ಅಥವಾ ಸಂಬಂಧಿಸಿದ ಗ್ರಾಮ ಆಡಳಿತ ಅಧಿಕಾರಿಗಳನ್ನು ಭೇಟಿ ಮಾಡಿ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಆರ್‌ಟಿಸಿಗೆ ಆಧಾರ್ ಸಂಖ್ಯೆ ಜೋಡಣೆಗೆ ಉದಾಸೀನ ಮಾಡಿದರೆ ಮುಂದಿನ ದಿನಗಳಲ್ಲಿ ಸರ್ಕಾರಿ ಸೌಲಭ್ಯ ಪಡೆಯಲು ತೊಂದರೆಯಾಗಲಿದೆ ಎಂದು ಎಚ್ಚರಿಸಿದ್ದಾರೆ.
ಆಧಾರ್ ಜೋಡಣೆಯಿಂದ ಜಮೀನಿನ ದಾಖಲೆ ಮತ್ತಷ್ಟು ಸುರಕ್ಷಿತವಾಗುತ್ತದೆ. ಖಾತಾ ವಿವಾದ ತಪ್ಪಿಸಲು, ಭೂ ದಾಖಲೆ ಪಡೆಯುವುದು, ಸರ್ಕಾರಿ ಯೋಜನೆಗೆ ಅರ್ಜಿ ಸಲ್ಲಿಕೆ, ಸಾಲ ಪ್ರಕ್ರಿಯೆ ಸುಲಭವಾಗುತ್ತದೆ. ಜಮೀನು ಮಾರಾಟದ ವೇಳೆ ಹೆಚ್ಚಿನ ಪಾರದರ್ಶಕತೆ ಇರುತ್ತದೆ. ಹಾಗಾಗಿ ಆರ್‌ಟಿಸಿಗೆ ಆಧಾರ್ ಜೋಡಣೆ ಮಾಡಬೇಕೆಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net