

ಕೋಲಾರ: ಅವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಇನ್ನೇನು ಮದುವೆಯಾಗಬೇಕು ಎನ್ನುವಷ್ಟರಲ್ಲಿ ಯುವತಿಯ ಕುಟುಂಬದವರು ನಿರಾಕರಿಸಿದರು. ಆದರೆ ಆ ಯುವಕ ಸುಮ್ಮನಿರದೆ ಸಿನಿಮೀಯ ಸ್ಟೈಲ್ನಲ್ಲಿ ತನ್ನ ಪ್ರೇಯಸಿಯನ್ನು ಸಿನಿಮೀಯ ಸ್ಟೈಲ್ನಲ್ಲಿ ಕಿಡ್ನಾಪ್ ಮಾಡಿದ್ದಾನೆ. ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.
ಘಟನೆ ನಡೆದಿದ್ದು ಕೋಲಾರ ಜಿಲ್ಲೆಯಲ್ಲಿ. ಹಾಡಹಗಲಲ್ಲೇ, ಜನನಿಬಿಡ ಪ್ರದೇಶದಲ್ಲಿಯೇ ಪ್ರೀತಿಸಿದ ಯುವತಿಯನ್ನು ಅಪಹರಣ ಮಾಡಿದ ಯುವಕನ ಕೈಚಳಕಕ್ಕೆ ಇಡೀ ಕೋಲಾರ ನಗರ ಬೆಚ್ಚಿಬಿದ್ದಿದೆ.
ಕಿಲಾರಿಪೇಟೆಯ ಶಿವ ಎಂಬ ಯುವಕ ಕೋಲಾರ ನಗರದ ಎಂಬಿ ಎಂಬಿ ರಸ್ತೆಯಲ್ಲಿರುವ ರೆಡ್ಡಿ ಎಲೆಕ್ಟ್ರಿಕಲ್ ಬಳಿ ಇಂದು ಮಧ್ಯಾಹ್ನ 12 ಗಂಟೆ ಹೊತ್ತಿಗೆ ಕಿಡ್ನಾಪ್ ಮಾಡಿದ್ದಾನೆ. ಶಿವ ಕಳೆದ ಹಲವು ವರ್ಷಗಳಿಂದ ದೇವಾಂಗಪೇಟೆಯ ಸಿರಿಶಾ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ ಇತ್ತೀಚೆಗೆ ಯುವತಿ ಪಾಲಕರು ಇವರಿಬ್ಬರ ಪ್ರೀತಿಗೆ ನಿರಕಾರಿಸಿದ್ದರು. ಆದರೆ ಸಿರಿಶಾಳನ್ನು ಬಿಟ್ಟುಕೊಡಲು ಸಿದ್ಧನಿಲ್ಲದ ಶಿವ, ಇನ್ನೋವಾ ಕಾರಿನಲ್ಲಿ ಬಂದು, ಯುವತಿಯನ್ನು ಪಕ್ಕಾ ಸಿನಿಮೀಯ ಸ್ಟೈಲ್ನಲ್ಲೇ ಅಪಹರಿಸಿದ್ದಾನೆ.
ಯುವತಿಯ ಜತೆಗಿದ್ದ ಪುಟ್ಟ ಬಾಲಕಿಯ ಚೀರಾಟದಿಂದ ಸ್ಥಳೀಯರು ಬಂದು ಸುತ್ತುವರೆದರು. ಆದರೆ ಅಷ್ಟರಲ್ಲಾಗಲೇ ಶಿವ ಆಕೆಯನ್ನು ಹೊತ್ತೊಯ್ದಿದ್ದ. ಯುವತಿಯನ್ನು ಕಿಡ್ನಾಪ್ ಮಾಡಿದ ದೃಶ್ಯ ರೆಡ್ಡಿ ಎಲೆಕ್ಟ್ರಿಕಲ್ನಲ್ಲಿ ಅಳವಡಿಸಿದ್ದ, ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಸ್ಥಳಕ್ಕೆ ಗಲ್ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರೆ. ಪ್ರಕರಣ ದಾಖಲಿಸಿಕೊಂಡು, ತನಿಖೆ ಶುರು ಮಾಡಿದ್ದಾರೆ. (ಏಜೆನ್ಸೀಸ್)