ಅನುಮಾನಾಸ್ಪದವಾಗಿ ಮೃತಪಟ್ಟ ಯುವತಿ

sucide
Published on

ಬೆಂಗಳೂರು: ಯುವತಿಯೊಬ್ಬಳು ಅನುಮಾನಾಸ್ಪವಾಗಿ ಮೃತಪಟ್ಟಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಬಾಗಲುಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ಬೆಳಗ್ಗೆ ಈ ಘಟನೆ ನಡೆದಿದೆ.
ದಾಸರಹಳ್ಳಿ ನಿವಾಸಿ ಶ್ರಾವಣಿ(೨೩) ಮೃತಪಟ್ಟವರು.
ಎಂಟನೇ ಮೈಲಿಯಲ್ಲಿರುವ ಗೋಲ್ಡನ್ ಜಿಮ್ನಲ್ಲಿ ರಿಸೆಪ್ಶನಿಸ್ಟ್ ಆಗಿದ್ದ ಶ್ರಾವಣಿ ಎಂದಿನಂತೆ ಸೋಮವಾರ ಕೆಲಸಕ್ಕೆ ಬಂದಿದ್ದು, ಬೆಳಗ್ಗೆ ೧೦.೩೦ ಇದ್ದಕ್ಕಿದ್ದ ಹಾಗೇ ವಾಂತಿ ಮಾಡಲು ಶುರು ಮಾಡಿದ್ದಾಳೆ. ಇದನ್ನು ಕಂಡ ಜಿಮ್ನವರು ಶ್ರಾವಣಿಯನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸಿದ ಶ್ರಾವಣಿ ಅಂತಿಮವಾಗಿ ರಾತ್ರಿ ೧೧.೩೦ ರ ಸಮಯದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಷ ಸೇವಿಸಿ ಆತ್ಮಹತ್ಯೆ?
ಶ್ರಾವಣಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮನೆಯವರು ಶ್ರಾವಣಿಗೆ ಮದುವೆ ಮಾಡಲು ಹುಡಗನನ್ನು ನೋಡಿದಿದ್ದರು. ಆದರೆ ಇದು ಆಕೆಗೆ ಇಷ್ಟವಿರಲಿಲ್ಲ. ಆಕೆ ಬೇರೆ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು.ಈ ವಿಚಾರಕ್ಕೆ ಮನೆಯವರೊಂದಿಗೆ ಜಗಳವಾಗಿದೆ. ಇದರಿಂದ ನೊಂದ ಶ್ರಾವಣಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಅಹಜಸಾವು ಪ್ರಕರಣ ದಾಖಲಿಸಿಕೊಂಡಿರುವ ಬಾಗಲಗುಂಟೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net