ಲುಂಗಿಯುಟ್ಟು ಲಂಡನ್​ ಬೀದಿ ಸುತ್ತಿದ ಯುವತಿಯನ್ನು ಕಂಡು ಬ್ರಿಟನ್​ ಮಂದಿ ಕೊಟ್ಟ ಪ್ರತಿಕ್ರಿಯೆ​ ವೈರಲ್!

Indian Girl
Published on

ನವದೆಹಲಿ: ತಮಿಳುನಾಡಿನ ವ್ಯಾಲೆರಿ ಹೆಸರಿನ ಯುವತಿ ಲುಂಗಿ ಧರಿಸಿಕೊಂಡು ಲಂಡನ್​ನಲ್ಲಿ ಬೀದಿ ಬೀದಿ ಸುತ್ತಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಭಾರತೀಯ ಸಂಸ್ಕೃತಿಯನ್ನು ಹೆಮ್ಮೆಯಿಂದ ಪ್ರದರ್ಶಿಸಿದ್ದಕ್ಕಾಗಿ ನೆಟ್ಟಿಗರು ಆಕೆಯನ್ನು ಶ್ಲಾಘಿಸುತ್ತಿದ್ದಾರೆ.

ಅಂದಹಾಗೆ ವ್ಯಾಲೆರಿ ಬಹಳ ಸಮಯದಿಂದ ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ. ಸದ್ಯ ವೈರಲ್​ ಆಗಿರುವ ವಿಡಿಯೋದಲ್ಲಿ ಆಕೆ ನೀಲಿ ಮತ್ತು ಬಿಳಿ ಬಣ್ಣದ ಲುಂಗಿಯನ್ನು ಉಟ್ಕೊಂಡು, ಟೀ ಶರ್ಟ್ ಮೇಲೆ ಶರ್ಟ್​ ಧರಿಸಿ ಹಾಗೂ ಸನ್​ಗ್ಲಾಸ್​ ಹಾಕ್ಕೊಂಡು ಲಂಡನ್​ ಬೀದಿಯಲ್ಲಿ ಅಡ್ಡಾಡಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಲಂಡನ್​ನ ಸೂಪರ್​ ಮಾರ್ಕೆಟ್​ಗೂ ಅದೇ ಅವತಾರದಲ್ಲಿ ವ್ಯಾಲೆರಿ ಹೋಗಿದ್ದು, ಆಕೆಯನ್ನು ನೋಡಿದ ಸ್ಥಳೀಯರು ಒಂದು ಕ್ಷಣ ತಮ್ಮ ಹುಬ್ಬೇರಿಸಿದ್ದಾರೆ.

ಲುಂಗಿಯಲ್ಲಿ ವ್ಯಾಲೆರಿಯನ್ನು ಕಂಡು ಕೆಲವರು ಆಶ್ಚರ್ಯ ವ್ಯಕ್ತಪಡಿಸಿದರೆ, ಇನ್ನು ಕೆಲವರು ಅವಳನ್ನು ನೋಡಿ ನಕ್ಕಿದ್ದಾರೆ. ಭಾರತೀಯ ಸಂಸ್ಕೃತಿಯನ್ನು ಜಗತ್ತಿಗೆ ತಿಳಿಸಲು ಈ ವಿಡಿಯೋ ಉತ್ತಮ ಮಾರ್ಗವಾಗಿದೆ ಎಂದು ಅನೇಕ ನೆಟ್ಟಿಗರು ಬಹುಪರಾಕ್​​ ಹೇಳಿದ್ದಾರೆ. ವ್ಯಾಲೆರಿ ತನ್ನ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ವಿಡಿಯೋ ಪೋಸ್ಟ್ ಮಾಡಿದ ಕೂಡಲೇ ಆ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಇಲ್ಲಿಯವರೆಗೆ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ ಮತ್ತು 1 ಲಕ್ಷಕ್ಕೂ ಅಧಿಕ ಮಂದಿ ಲೈಕ್​ ಮಾಡಿದ್ದಾರೆ.

ನೆಟ್ಟಿಗರೊಬ್ಬರು "ವಾವ್ ಇದು ಅದು ಅದ್ಭುತವಾಗಿದೆ" ಎಂದು ಕಾಮೆಂಟ್​ ಮಾಡಿದ್ದಾರೆ. "ಅಕ್ಕ, ನೀನಗೊಂದು ಸಲ್ಯೂಟ್ ಮಾಡಬೇಕು. ನಿಜಕ್ಕೂ ಇದು ನನಗೆ ಇಷ್ಟವಾಯಿತು ಎಂದು ಮತ್ತೊಬ್ಬ ನೆಟ್ಟಿಗ ಕಾಮೆಂಟ್​ ಮಾಡಿದ್ದಾರೆ. ಲಂಡನ್​ನಲ್ಲಿ ಲುಂಗಿ ಹಾಕಿಕೊಂಡು ಕುಣಿದು ಕುಪ್ಪಳಿಸುವುದು ಅಪರೂಪವಾದ್ದರಿಂದ ವ್ಯಾಲೆರಿಯ ಅದ್ಭುತ ನೃತ್ಯಕ್ಕೆ ಪ್ರೇಕ್ಷಕರು ಮರುಳಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net