ಕ್ಯಾನ್ಸರ್‌ಪೀಡಿತ ಯುವಕ ನೆರವಿನ ಮೊರೆ

WhatsApp Image 2023-11-22 at 4.57.24 PM
Published on

ರಾವಂದೂರು: ಕ್ಯಾನ್ಸರ್‌ಗೆ ತುತ್ತಾದ ಯುವಕ ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿದ್ದಾನೆ.

ಪಿರಿಯಾಪಟ್ಟಣ ತಾಲೂಕು ರಾವಂದೂರು ಎಸ್.ಕೊಪ್ಪಲು ಗ್ರಾಮದ ಕೃಷ್ಣೋಜಿರಾವ್ ಮತ್ತು ಲೀಲಾವತಿ ಅವರ ಪುತ್ರ 27ರ ವಯೋಮಾನದ ಹರೀಶ್ ಬ್ಲಡ್‌ಕ್ಯಾನ್ಸರ್‌ನಿಂದ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾನೆ. ಬಡತನದಿಂದ ಜೀವನ ಸಾಗಿಸುತ್ತಿದ್ದು, ಈ ಯುವಕ ಗ್ಯಾಸ್ ಅಂಗಡಿಯಲ್ಲಿ ಕೆಲಸ ನಿರ್ವಹಿಸಿ ಪತ್ನಿ ಹಾಗೂ ಇಬ್ಬರು ಹೆಣ್ಣುಮಕ್ಕಳನ್ನು ಸಾಕುತ್ತಿದ್ದ. ಇದೀಗ ಬ್ಲಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಈತನ ಕುಟುಂಬ ಚಿಕಿತ್ಸೆ ಕೊಡಿಸಲಾಗದೆ ಕಂಗಾಲಾಗಿದೆ. ಈತನ ಚಿಕಿತ್ಸೆಗೆ ಆರ್ಥಿಕ ನೆರವಿನ ಅಗತ್ಯವಿದ್ದು, ಆರ್ಥಿಕ ಸಹಾಯ ಮಾಡುವವರು ಬ್ಯಾಂಕ್ ಖಾತೆ ಸಂಖ್ಯೆ: 79640100003597 BARB0VJRAVA ಅಥವಾ ಗೂಗಲ್ ಪೇ ಅಥವಾ ಫೋನ್ ಪೇ ಮೊಬೈಲ್ ಸಂಖ್ಯೆ: 8867219714 ಹಣ ಸಂದಾಯ ಮಾಡಿ ನೆರವಾಗಿ ಎಂದು ಪ್ರಕಟಣೆ ಮನವಿ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net