ಚಿಕ್ಕಮಗಳೂರು: ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಕ್ರಿಕೆಟ್ ಆಡುವಾಗ ಕಿರಿಕ್ ಮಾಡಿಕೊಂಡ ಒಂದು ಗುಂಪಿನ ಯುವಕರು ಮತ್ತೊಂದು ಗುಂಪಿನ ಯುವಕನಿಗೆ ಚಾಕು ಇರಿದು ಹಲ್ಲೆ ನಡೆಸಿದ ಘಟನೆ ನಗರದ ಗೌರಿ ಕಾಲುವೆ ಬಡಾವಣೆಯಲ್ಲಿ ಸೋಮವಾರ ಜರುಗಿದೆ.
ಗಾಂಜಾ ಸೇವನೆ ವಿಚಾರವಾಗಿ ಹಿಂದೆಯೊಂದು ಭಾರಿ ಇಬ್ಬರ ನಡುವೆ ಗಲಾಟೆಯಾಗಿದೆ. ಇದು ಹಳೇ ವೈಷ್ಯಮವಾಗಿ ಮುಂದುವರಿದುಕೊಂಡು ಬಂದಿದೆ. ಸೋಮವಾರ ಬೆಳಗ್ಗೆ ಕ್ರಿಕೆಟ್ ಅಡಬೇಕಾದರೆ ವಿನಾಕಾರಣ ಕಿರಿಕ್ ಮಾಡಿಕೊಂಡಿದ್ದಾರೆ. ಇಬ್ರಾಹಿಂ ಎಂಬ ಯುಕನಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾರೆ.
ಕ್ರಿಕೆಟ್ ಆಡುವಾಗ ಆದ ಜಗಳವು ವಿಕೋಪಕ್ಕೆ ತಿರುಗಿದೆ, ಆಗ ಇಬ್ರಾಹಿಂ ಎದೆ ಭಾಗಕ್ಕೆ ತೀವ್ರವಾಗಿ ಚಾಕುವಿನಿಂದ ಇರಿದು ಸಮೀಪದಲ್ಲಿದ್ದ ರಾಜಕಾಲುವೆಗೆ ಎಸೆದು ಹಲ್ಲೆ ಮಾಡಿರುವ ಯುವಕರು ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಇಬ್ರಾಹಿಂ ಕಾಲುವೆಯಿಂದ ಮೇಲೆ ಬರಲು ಹೋರಾಡುತ್ತಿದ್ದನು. ನೋಡಿದ ಸ್ಥಳೀಯರು ಕಾಲುವೆಯಿಂದ ಮೇಲೆತ್ತಿ ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಬಸವನಹಳ್ಳಿ ಪೊಲೀಸರು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.